ಬೆಳಗಾವಿ – ಏರ್ ಫೋರ್ಸ ವಿಂಗ್ ಮರಾಠಾ ರೆಜಮೆಂಟ್ ಹೊಂದಿರುವ ಐತಿಹಾಸಿಕ ನಗರಿಯ ಸಾಂಬ್ರಾ ವಿಮಾನ ನಿಲ್ಧಾಣ ಈಗ ಹೊಸ ಸ್ವರೂಪ ಪಡೆದುಕೊಂಡಿದೆ 142 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಹೈಟೆಕ್ ಏರ್ ಪೋರ್ಟ ಈಗ ಉದ್ಘಾಟನೆಗೆ ರೆಡಿಯಾಗಿದೆ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಟ್ಟು 142 ಕೋಟಿ ರೂ ವೆಚ್ಚದಲ್ಲಿ ರನ್ ವೇ ವಿಸ್ತರಣೆ ಜೊತೆಗೆ ಹೈಟೆಕ್ ಟರ್ಮಿನಲ್ ನಿರ್ಮಿಸಲಾಗಿದ್ದು ಅಗಸ್ಟ ತಿಂಗಳ ಕೊನೆಯ ವಾರದಲ್ಲಿ ಹೊಸ ಏರ್ ಪೋರ್ಟ್ ಉದ್ಘಾಟನೆ ಆಗಲಿದೆ ಎಂದು ಸಂಸದ ಸುರೇಶ ಅಂಗಡಿ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ತಿಳಿಸಿದ್ದಾರೆ
ಬೆಳಗಾವಿ ನಗರ ಕರ್ನಾಟಕ,ಗೋವಾ,ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿದೆ ಇಲ್ಲಿ ಯ ಫೌಂಡ್ರಿ ಉದ್ಯಮ ಮತ್ತು ಕೆಎಲ್ಇ ಸಂಸ್ಥೆಯ ಶಿಕ್ಷಣದ ಗುಣಮಟ್ಟ ಜಾಗತಿಕ ಮಟ್ಡದಲ್ಲಿ ಪ್ರಸಿದ್ಧಿ ಪಡೆದಿದೆ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಆಗುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ರಪ್ತು ಮಾಡಬಹುದಾದ ಹೂವು.ಹಣ್ಣು ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಸಾಂಬ್ರಾ ವಿಮಾನ ನಿಲ್ದಾಣ ದ ವಿಸ್ತರಣೆ ಸ್ಥಳೀಯ ಹಣ್ಣು ಹೂವು ತರಕಾರಿಗಳನ್ನು ವಿದೇಶಕ್ಕೆ ರಪ್ತು ಮಾಡಲು ಅನಕೂಲವಾಗಲಿದೆ
ಸಾಂಬ್ರಾ ವಿಮಾನ ನಿಲ್ಧಾಣದ ರನ್ ವೇ ವಿಸ್ತರಣೆ ಆಗಿರುವದರಿಂದ ಬೆಳಗಾವಿಗೆ ಬೋಯಿಂಗ್ ವಿಮಾನಗಳು ಲ್ಯಾಂಡಿಂಗ್ ಆಗುವದರಲ್ಲಿ ಸಂದೇಹವೇ ಇಲ್ಲಿ ಬೆಳಗಾವಿಗೆ ಬೋಯಿಂಗ್ ವಿಮಾನ ಇಳಿಸಲು ಜಿಲ್ಲೆಯ ಸಂಸದರಾದ ಸುರೇಶ ಅಂಗಡಿ,ಪ್ರಭಾಕರ ಕೋರೆ,ಮತ್ತು ಪ್ರಕಾಶ ಹುಕ್ಕೇರಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ
ಒಟ್ಟಾರೆ ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಓರ್ ಪೋರ್ಟ್ ರೆಡಿಯಾಗಿದ್ದು ಸಂತಸದ ಸಂಗತಿಯಾಗಿದೆ