ಬೆಳಗಾವಿ-ಬರಗಾಲದ ಸಂಕಷ್ಟದಲ್ಲಿಯೂ ಸಂಕ್ರಾಂತಿಯ ಉತ್ಸಾಹ ಕುಗ್ಗಿಲ್ಲ ನಗರದಲ್ಲಿ ಹಬ್ಬದ ಖರೀದಿ ಜೋರಾಗಿದ್ದು ಕುಂದಾನಗರಿ ಬೆಳಗಾವಿಯಲ್ಲಿ ಹಬ್ಬದ ಸಡಗರ ಮನೆಮಾಡಿದೆ
ಬೆಳಗಾವಿ ಪೇಠೆಯಲ್ಲಿ ಹಬ್ಬದ ಖರೀದಿಗಾಗಿ ಹಳ್ಳಿಯ ಜನ ಮುಗಿಬಿದ್ದಿದ್ದಾರೆ ಬಿಳಿ ಯಳ್ಳು ತಿಳಗುಳ ಮಾರಾಟ ಜೋರಾಗಿ ನಡೆದಿದೆ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದರೂ ಜನರ ಉತ್ಸಾಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ
ಉತ್ರರ ಕರ್ನಾಟಕದಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬದ ದಿನ ಉಟದ ಬುತ್ತಿ ಕಟ್ಟಿಕೊಂಡು ಹೊಳೆಯ ದಂಡೆಗೆ ಹೋಗುತ್ತಾರೆ ಹೊಳೆಯಲ್ಲಿ ಸ್ನಾನ ಮಾಡಿ ಪಾವನರಾಗುತ್ತಾರೆ ಮಕ್ಕಳು ಹೊಳೆಯ ದಂಡೆಯ ಮೇಲೆ ಗಾಳಿಪಟ ಹಾರಿಸಿ ಸಂಬ್ರಮಿಸುತ್ತಾರೆ
ಸಂಕ್ರಾತಿ ಹಬ್ಬದ ದಿನ ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ನದೀ ದಂಡೆಯ ಮೇಲೆ ದೊಡ್ಡ ಜಾತ್ರೆ ನಡೆಯುತ್ತದೆ ಮಿನಿ ಕೂಡಲ ಸಂಗಮ ಎಂದೇ ಕರೆಯಲ್ಪಡುವ ಬಸವೇಶ್ವರರ ಧರ್ಮ ಪತ್ನಿ ಗಂಗಾಂಬಿಕೆಯ ಗುಡಿಯ ಜಾತ್ರೆಯೂ ಹಬ್ಬದ ದಿನ ನಡೆಯುತ್ತದೆ
ಖಾನಾಪೂರ ತಾಲೂಕಿನ ಪಾರಿಶ್ವಾಡ ಅಸೋಗಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳ ದಂಡೆಗಳ ಮೇಲೆ ಭಕ್ತರು ದಂಡೇತ್ತಿ ಹೋಗುತ್ತಾರೆ ಎರಡು ದಿನಗಳ ಕಾಲ ಎಂಜಾಯ್ ಮಾಡುವದು ಇಲ್ಲಿಯ ಸ್ಪೇಶ್ಯಾಲಿಟಿ
ಹಾಗಿದ್ದರೆ ನೀವೂ ಈಗಲೇ ಪ್ಲ್ಯಾನ್ ಮಾಡಿ ಸಮೀಪದ ನದಿ ದಂಡೆಯನ್ನು ಆಯ್ದುಕೊಂಡು ಎರಡು ದಿನ ತಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡಿ ಸರ್ವರಿಗೂ ಬೆಳಗಾವಿ ಸುದ್ಧಿ ಡಾಟ್ ಕಾಮ್ ಪರವಾಗಿ ಸಂಕ್ರಾಂತಿ ಹಬ್ಬದ ಶುಭಾಶಯಗಳು