ಬೆಳಗಾವಿ- ಬೆಳಗಾವಿ ನಗರದ ಹೃದಯ ಭಾಗದಲ್ಲಿ ಇರುವ ಸರ್ದಾರ ಮೈದಾನದ ಅಭಿವೃದ್ಧಿಗೆ ಕೊನೆಗೂ ಕಾಯಕಲ್ಪ ಸಿಕ್ಕಿದೆ ಈ ಮೈದಾನ ಈಗ ಕ್ರಿಕೆಟ್ ಸ್ಟೇಡಿಯಂ ಆಗಿ ಅಭಿವೃದ್ಧಿಗೊಳ್ಳುತ್ತಿದೆ
ಮುಖ್ಯಮಂತ್ರಿಗಳ ನಗರೋಥ್ಥಾನ ಯೋಜನೆಯ ನೂರು ಕೋಟಿ ವಿಶೇಷ ಅನುದಾನದ ಒಂದು ಕೋಟಿ ರೂ ವೆಚ್ಚದಲ್ಲಿ ಈ ಮೈದಾನ ಅಭಿವೃದ್ಧಿಯಾಗುತ್ತಿದೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಯಲಿದೆ
ಮೈದಾನದಲ್ಲಿ ಮೂರು ಕಡೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗುತ್ತಿದೆ ಈಗ ಮುಖ್ಯ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವ ಕಾಮಗಾರಿ ನಡೆದಿದೆ
ಮುಖ್ಯ ಪ್ರೇಕ್ಷಕರ ಗ್ಯಾಲರಿಯ ಕೆಳ ಮಹಡಿಯಲ್ಲಿ ಡ್ರೆಸಿಂಗ್ ರೂಂ ಬಾತರೂಮ ಸೇರಿದಂತೆ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಮಾಡಲಾಗುತ್ತಿದೆ ಜೊತೆಗೆ ಇಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ ಕೂಡಾ ನಿರ್ಮಿಸುವ ಕಾಮಗಾರಿ ನಡೆದಿದೆ
ಶಾಸಕ ಫಿರೋಜ್ ಸೇಠ ಅವರ ಪ್ರಯತ್ನದಿಂದಾಗಿ ಸರ್ದಾರ ಮೈದಾನಕ್ಕೆ ಅಭಿವೃದ್ಧಿಯ ಭಾಗ್ಯ ಒದಗಿ ಬಂದಿದೆ ಮಳೆಗಾಲ ಆರಂಭವಾಗುವ ಮೊದಲು ಮೈದಾನದ ಸ್ವರೂಪ ಬದಲಾಗಿ ಮೈದಾನದಲ್ಲಿ ಹುಲ್ಲಿನ ಹಾಸಿಗೆ ಬೆಳೆದು ಮೈದಾನ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಲಿದೆ