ಬೆಳಗಾವಿ-ಫೇಸ್ ಬುಕ್ ,ವ್ಯಾಟ್ಸಪ್, ಮತ್ತು ಇನ್ಸಟಾಗ್ರಾಮಗಳಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಈ ಅಕೌಂಟ್ ನಲ್ಲಿ ಯುವತಿಯರ ಪೋಟೋ ಹಾಕಿ ಯುವಕರ ಜೊತೆ ಚಾರ್ಟಿಂಗ್ ಮಾಡಿ ವ್ಯೆವಸ್ಥಿತವಾಗಿ ಸೆಕ್ಸ್ ದಂಧೆ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ.
ನಿನ್ನೆ ಶನಿವಾರ ಬೆಳಗಾವಿಯ ಸೈಬರ್ ಕ್ರೈಂ ಬ್ರ್ಯಾಂಚಿನ ಇನೆಸ್ಪೆಕ್ಟರ್ ಗಡ್ಡೇಕರ ಅವರು ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿನ ಮಸ್ಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿ,ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದರು.
ಶನಿವಾರ ದಾಳಿ ನಡೆದ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಎಪಿಎಂಸಿ ಪೋಲೀಸರು ಸದಾಶಿವ ನಗರದ ಮಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂದಿಸಿ ಯುವಕರನ್ನು ರಕ್ಷಿಸಿ ದಾಳಿಯನ್ನು ಮುಂದುವರೆಸಿದ್ದಾರೆ.
ಮಸ್ಯಾಜ್ ಸೆಂಟರ್ ನಲ್ಲಿ ಕೇವಲ ಸೆಕ್ಸ್ ದಂಧೆಯ ಜೊತೆಗೆ,ಹನಿಟ್ರ್ಯಾಪ್ ದಂಧೆ ಕೂಡಾ ನಡೆತುತ್ತಿತ್ತು ಎನ್ನುವ ಶಂಕೆ ವ್ಯೆಕ್ತವಾಗಿದ್ದು, ಪೋಲೀಸರ ತಮಿಖೆಯಿಂದ ಈ ಮಸ್ಯಾಜ್ ಸೆಂಟರ್ ಗಳಲ್ಲಿ ಯಾವ ಯಾವ ರೀತಿಯ ಅನೈತಿಕ ಚಟುಕಟಿಕೆಗಳು ನಡೆಯುತ್ತವೆ ಅನ್ನೋದು ಗೊತ್ತಾಗಲಿದೆ.
ಫೇಸ್ ಬುಕ್ ನಲ್ಲಿ ದೋಸ್ತಿ ಮಾಡಿ,ಚಾರ್ಟಿಂಗ್ ನಂತರ ಡೇಟೀಂಗ್ ಮಾಡಿ ಈದಾದಬಳಿಕ ಮಸ್ಸ್ಯಾಜ್ ಸೆಂಟರ್ ಗೆ ಕರೆದೊಯ್ದು ಚೀಟೀಂಗ್ ಮಾಡುವ ದಂಧೆ ಈದಾಗಿದೆ ಎಂದು ತಿಳಿದು ಬಂದಿದ್ದು ಡಿಸಿಪಿ ವಿಕ್ರಂ ಅಮಟೆ ಅವರು,ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಎಲ್ಲ ಆಕ್ರಮ ದಂಧೆಗಳಿಗೆ ಕಡಿವಾಣ ಹಾಕುತ್ತಿದ್ದು,ಮಟಕಾ,ಜೂಜಾಟ,ಗಾಂಜಾ ವಿರುದ್ಧ ಸಮರ ಸಾರಿರುವ ಅವರು ಈಗ ಹೈಟೆಕ್ ಸೆಕ್ಸ್ ದಂಧೆಗೆ ಲಗಾಮು ಹಾಕಲು ಕಾರ್ಯಚರಣೆ ಆರಂಭಿಸಿದ್ದಾರೆ…
ಸದಾಶಿವ ನಗರದಲ್ಲೂ ದಾಳಿ….
ಬೆಳಗಾವಿ ನಗರದ ಸದಾಶಿವ ನಗರದಲ್ಲೂ ಎಪಿಎಂಸಿ ಪೋಲೀಸ್ ಇನೆಸ್ಪೆಕ್ಟರ್ ಜಾವೇದ ಮುಶಾಪೂರೆ ನೇತ್ರತ್ವದಲ್ಲಿ ಮಸ್ಯಾಜ್ ಸೆಂಟರ್ ಮೇಲೆ ದಾಳಿ ನಡೆದಿದೆ
ಆರೋಪಿಗಳಾದ 1) ಮಾರುತಿ ಬಾಳಪ್ಪಾ ಕಳಗೇರಿ ವಯಾ: 3೦ ವರ್ಷ ಸಾ|| ವನ್ನೂರ
ತಾllಬೈಲಹೊಂಗಲ 2) ಸಿದ್ಧಪ್ಪ ಪುಂಡಲೀಕ ಚೌಗಲಾ ವಯಾ: 33 ವರ್ಷ ಸಾ||ಹುಲ್ಲೋಳ ತಾ|| ಹುಕ್ಕೇರಿ ಎಂಬಾತರನ್ನು ಬಂಧಿಸಲಾಗಿದೆ.
ಸದಾಶಿವ ನಗರ ಲಾಸ್ಟ ಬಸ್ ಸ್ಟಾಪ ಹತ್ತಿರ ಆರೋಪಿತರಾದ 1) ಮಾರುತಿ ಬಾಳಪ್ಪಾ
ಕಳಗೇರಿ ಸಾ|| ವನ್ನೂರ ತಾ||ಬೈಲಹೊಂಗಲ 2) ಸಿದ್ದಪ್ಪ ಮಂಡಲೀಕ ಚೌಗಲಾ ಸಾ|| ಹುಲ್ಲೋ
ತಾ|| ಹುಕ್ಕೇರಿ ಇವರು ಮನೆಯಲ್ಲಿ ಇಬ್ಬರೂ ಹೆಣ್ಣುಮಕ್ಕಳನ್ನು ಬಳಸಿಕೊಂಡು, ಪ್ರತಿಯೊಬ್ಬ
ಗಿರಾಕಿಗಳಿಗೆ 2500/- ರೂ ತೆಗೆದುಕೊಂಡು ನೊಂದ ಮಹಿಳೆಯರಿಗೆ 1000/- ರೂ ಕೊಡುತ್ತಿದ್ದರು.
ಸದರಿ ಆರೋಪಿತರು ಬೇರೆ ಬೇರೆ ರಾಜ್ಯದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ತಮ್ಮ
ಕೃತ್ಯಕ್ಕೆ ಬಳಸುತ್ತಿದ್ದರು ಎಂದು ಗೊತ್ತಾಗಿದೆ.