ಬೆಳಗಾವಿ- ನಗರದದ ಶಹಾಪೂರ ಪ್ರದೇಶದಲ್ಲಿ ಇಂದು ರಂಗ ಪಂಚಮಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು ಬೆಳ್ಳಂ ಬೆಳಿಗ್ಗೆ ಪಿಚಕಾರಿ ಹಿಡಿದು ಬಣ್ಣದಾಟ ಆರಂಭಿಸಿದರು
ಮಕ್ಕಳು, ಯುವಕರು, ಯುವತಿಯರು ಮಹಿಳೆಯರು ಅಲ್ಲಲ್ಲಿ ತಂಡೋಪ ತಂಡವಾಗಿ ಗುಂಪುಗೂಡಿ ಬಣ್ಣದಾಟವಾಡಿ ಎಲ್ಲರ ಗಮನ ಸೆಳೆದರು
ಶಹಶಪೂರ ವಡಗಾಂವ ಪ್ರದೇಶದ ಗಲ್ಲಿ ಗಲ್ಲಿ ಗಳಲ್ಲಿ ಯುವ ಪಡೆ ಡಿಜೆ ತಾಳಕ್ಕೆ ಹೆಜ್ಜೆ ಹಾಕಿ ಸುಸ್ತಾದರು ಕೆಲವರಂತೂ ಪರಸ್ಪರ ನೀರು ಸುರಿದುಕೊಂಡು ರಂಗಪಂಚಮಿಯ ಸಂಬ್ರಮವನ್ನು ಇಮ್ಮಡಿಗೊಳಿಸಿದರು
ರಂಗ ಪಂಚಮಿ ನಿಮಿತ್ಯ ಶಹಶಪೂರ ಮತ್ತು ವಡಗಾಂವ ಪ್ರದೇಶದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ಏರ್ಪಡಿಸಲಾಗಿತ್ತು ನಗರ ಸೇವಕರಾದ ದೀಪಕ ಜಮಖಂಡಿ,ರಮೇಶ ಸೊಂಟಕ್ಕಿ ಹಾಗು ಸಂಜಯ ಸವ್ವಾಸೇರಿ ಅವರು ಯುವಕರ ಜೊತೆ ಬಣ್ಣದೋಕುಳಿ ಆಡಿ ಸಂಭ್ರಮುಸಿದರು
ಮಾದ್ಯಮಗಳ ಜೊತೆ ಮಾತನಾಡಿದ ಮಾಜಿ ನಗರ ಸೇವಕ ನೇತಾಜಿ ಜಾಧವ ಶಹಾಪೂರ, ವಡಗಾಂವ ಮತ್ತು ಖಾಸಬಾಗ ಪ್ರದೇಶದಲ್ಲಿ ಹೋಳಿಹಬ್ಬದ ಐದನೇಯ ದಿನ ರಂಗಪಂಚಮಿ ಆಚರಿಸುವ ಸಂಪ್ರದಾಯ ಅನೇಕ ತೆಲೆಮಾರುಗಳಿಂದ ನಡೆದುಕೊಂಡು ಬಂದಿದೆ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು