ಬೆಳಗಾವಿ- ಐ ಬ್ಯಾಂಕ್, ಬ್ಲಡ್ ಬ್ಯಾಂಕ್,ನಂತರ ಈಗ ಬೆಳಗಾವಿಯಲ್ಲಿ ಸ್ಕೀನ್ ಬ್ಯಾಂಕ್ ಆರಂಭವಾಗಲಿದೆ
ಬೆಳಗಾವಿಯ ರೋಟರಿ ಸಂಸ್ಥೆ ಕೆಎಲ್ಇ ಸಂಸ್ಥೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಸ್ಕೀನ್ ಬ್ಯಾಂಕ್ ಆರಂಭಿಸಲು ನಿರ್ಧರಿಸಿದೆ
ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಈ ಸ್ಕೀನ್ ಬ್ಯಾಂಕ್ ಇದ್ದು ಬೆಳಗಾವಿಯಲ್ಲಿ ಆರಂಭವಾಗಲಿರುವ ಈ ಸ್ಕೀನ್ ಬ್ಯಾಂಕ್ ರಾಜ್ಯದ ಎರಡನೇಯ ಸ್ಕೀನ್ ಬ್ಯಾಂಕ್ ಆಗಲಿದೆ
ಸ್ಕೀನ್ ಬ್ಯಾಂಕ್ ಗೆ ಅಗತ್ಯವಿರುವ ಯಂತ್ರಗಳಿಗೆ ಈಗಾಗಲೇ ಆರ್ಡರ್ ಮಾಡಲಾಗಿದ್ದು ಫೆಬ್ರುವರಿ ತಿಂಗಳಲ್ಲಿ ಬೆಳಗಾವಿಯ ಸ್ಕೀನ್ ಬ್ಯಾಂಕ್ ಶುಭಾರಂಭಗೊಳ್ಳಲಿದೆ
ಐಡೋನೇಟ್,ಡೆಡ್ ಬಾಡಿ ಡೋನೇಟ್ ಮಾಡಿದಂತೆ ಸ್ಕೀನ್ ಡೋನೇಟ್ ಮಾಡಬಹುದಾಗಿದೆ ಡೋನೇಟ್ ಮಾಡಿದ ಸ್ಕೀನ್ ಸಂಗ್ರಹಿಸಿಡಲು ಅಗತ್ಯವಾದ ಯಂತ್ರಗಳು ಶೀಘ್ರದಲ್ಲಿಯೇ ಬೆಳಗಾವಿಗೆ ಬರಲಿವೆ
ಸುಟ್ಟು ಗಾಯಗಳಾದಾಗ,ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯ ಆದಾಗ ಈ ಸ್ಕೀನ್ ಬ್ಯಾಂಕ್ ಅತ್ಯಂತ ಉಪಯೋಗವಾಗಲಿದೆ
ದೇಹದ ಬಹುಭಾಗ ಸುಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾದರೆ ಸ್ಕೀನ್ ಅಗತ್ಯ ಹೀಗಾಗಿ ಈ ಸ್ಕೀನ್ ಬ್ಯಾಂಕ್ ಬೆಂಕಿ ಅವಘಡ ದಲ್ಲಿ ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯಕಾರಿಯಾಗಲಿದೆ
ಸ್ಕೀನ್ ಬ್ಯಾಂಕಿನಲ್ಲಿ
ಡೋನೇಟ್ ಮಾಡಿದ ಚರ್ಮವನ್ನು ಆರು ವರ್ಷಗಳ ಕಾಲ ಸುರಕ್ಷಿತ ವಾಗಿ ಇಡಬಹುದಾಗಿದೆ
ಬೆಳಗಾವಿಯ ರೋಟರಿ ಸಂಸ್ಥೆ ಸ್ಕೀನ್ ಬ್ಯಾಂಕಿಗೆ ಲೋಗೋ ಸಿದ್ಧಪಡಿಸಲು ಸ್ಪರ್ದೆ ಏರ್ಪಡಿಸಿದೆ ಆಯ್ಕೆಯಾಗುವ ಲೋಗೋ ಗೆ ಮೂರು ಸಾವಿರ ರೂ ಬಹುಮಾನ ಮತ್ತು ಲೋಗೋ ಸಿದ್ಧಪಡಿಸಿದ ವ್ಯೆಕ್ತಿ ಗೆ ರೋಟರಿ ಅನ್ನೋತ್ಸವದಲ್ಲಿ ಸನ್ಮಾನ ಮಾಡಲು ನಿರ್ಧರಿಸಲಾಗಿದೆ ಲೋಗೋ ಸಿದ್ಧಪಡಿಸಲು ಜನೇವರಿ ,7 ಕೊನೆಯ ದಿನಾಂಕ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ