ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ,ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್…!!
ಬೆಳಗಾವಿ- ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದ್ದು ವಾರದೊಳಗಾಗಿ ಎಲ್ಲರೂ ಜಾಗೃತರಾಗಿ ಕೆಲಸ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದರು
ಬುಡಾ ಕಚೇರಿಯಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು.
ಹೆಸ್ಕಾಂ,ನವರು ಅಂಡರ್ ಗ್ರೌಂಡ್ ಕೇಬಲಿಂಗ್,ಬಿ ಎಸ್ ಎನ್ ಎಲ್ ನವರು ಕೇಬಲ್ ಶಿಪ್ಟಿಂಗ್ ಗ್ಯಾಸ್ ಪಾಯಿಪಲೈನ್ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮಾಡದೇ ಇರುವದರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಅಭಯ ಪಾಟೀಲ ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡರು.
ವಾರದೊಳಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಸೇರಿ ಎಲ್ಲ ಕಾಮಗಾರಿಗಳನ್ನು ಮುಗಿಸಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅನಕೂಲ ಮಾಡಿಕೊಡಬೇಕು ವಾರದ ಬಳಿಕ ಕಾಮಗಾರಿ ವೀಕ್ಷಣೆ ಮಾಡುತ್ತೇನೆ ಲೋಪ ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತೇನೆ ಎಂದು ಅಧಿಕಾರಿಗಳಿಗೆ ಅಭಯ ಪಾಟೀಲ ಎಷ್ಷರಿಕೆ ನೀಡಿದ್ರು
ಬೆಳಗಾವಿ ನಗರದಲ್ಲಿ ಬಿ ಎಸ್ ಎನ್ ಎಲ್ ನೆಟವರ್ಕ್ ಸರಿಯಾಗಿಲ್ಲ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ,ಖಾಸಗಿ ಕಂಪನಿಗಳ ನೆಟವರ್ಕ್ ಸರಿಯಾಗಿ ಬರುತ್ತದೆ,ಆದರೆ ಬಿ ಎಸ್ ಎನ್ ಎಲ್ ನೆಟವರ್ಕ್ ಬಗ್ಗೆ ತೆಲೆಕೆಡಿಸಿಕೊಳ್ಳುತ್ತಿಲ್ಲ ಕೇಂದ್ರದಲ್ಲಿ ಸರ್ಕಾರ ನಮ್ಮದಿದೆ ಅಂತಾ ನಾನು ಸ್ಮನಿರುವದಿಲ್ಲ ಗ್ರಾಹಕರಿಗೆ ಉತ್ತಮ ಸೇವೆ ಕೊಡಿ ಎಂದು ಬಿ ಎಸ್ ಎನ್ ಎಲ್ ಅಧಿಕಾರಿಗಳಿಗೆ ಶಾಸಕ ಅಭಯ ಪಾಟೀಲ ತರಾಟೆಗೆ ತೆಗೆದುಕೊಂಡರು.
ಸ್ಮಾರ್ಟ್ ಸಿಟಿ ಎಂ ಡಿ ಶಶಿಧರ ಕುರೇರ ಪಾಲಿಕೆ ಆಯುಕ್ತರು,ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.