ಬೆಳಗಾವಿ- ಬೆಳಗಾವಿ ನಗರದಲ್ಲಿ ಸದ್ದಿಲ್ಲದೆ ಸ್ಮಾರ್ಟ್ ಕಾಮಗಾರಿಗಳು ನಡೆತುತ್ತಿವೆ ಬಹಳಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ,ಹಂತ ಹಂತವಾಗಿ ಬೆಳಗಾವಿ ನಗರವನ್ನು ಸ್ಮಾರ್ಟ್ ಮತ್ತು ಹೈಟೆಕೆ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು ಕುಂದಾ ನಗರಿಯ ಎಲ್ಲ ಬೀದಿಗಳು ಹೊಸ ಬೆಳಕಿನಲ್ಲಿ ಬೆಳಗಲಿವೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿ ಮಹಾನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಬೀದಿಗಳಿಗೆ ಅತ್ಯಾಧುನಿಕ ಹೊಸ LED ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು ಪಬ್ಲಿಕ್ ಪ್ರಾವೇಟ್ ಪಾಟನರ್ ಶಿಪ್ ಅಡಿಯಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಉಪ ಚುನಾವಣೆ ಮುಗಿದ ಬಳಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಬೆಳಗಾವಿ ನಗರದಲ್ಲಿರುವ ಬೀದಿ ದೀಪ,ಗಾರ್ಡನ್ ಗಳ ದೀಪ,ಮೈದಾನದಲ್ಲಿ ಇರುವ ಎಲ್ಲ ಹಳೆಯ ಬೀದಿ ದೀಪಗಳನ್ನು ತೆಗೆದು ಹಾಕಿ ವಿದ್ಯುತ್ ಉಳಿತಾಯ ಮಾಡಿ ಹೆಚ್ಚು ಬೆಳಕು ನೀಡುವ ಹೊಸ LED ಲ್ಯಾಂಪ್ ಅಳವಡಿಸುವ ಯೋಜನೆ ಇದಾಗಿದೆ
ಬೆಳಗಾವಿ ನಗರದಲ್ಲಿರುವ ಸುಮಾರು 35 ಸಾವಿರ ಕಂಬಗಳಿಗೆ ಹೊಸ ದೀಪಗಳನ್ನು ಅಳವಡಿಸಲಾಗುತ್ತಿದೆ .ಇದಕ್ಕೆ ಸುಮಾರು 54 ಕೋಟಿ ರೂ ವೆಚ್ಚವಾಗಲಿದ್ದು ಗುತ್ತಿಗೆ ಪಡೆದ ಕಂಪನಿ ಈ ವೆಚ್ಚವನ್ನು ಮಹಾನಗರ ಪಾಲಿಕೆಯ ವಿದ್ಯುತ್ ಉಳಿತಾಯದ ಹಣದಲ್ಲಿ ಹಣವನ್ನು ಭರಿಸಿಕೊಳ್ಳಲಿದೆ.ಹೊಸ LED ದೀಪಗಳ ಅಳವಡಿಕೆಯಿಂದ ಶೇ50 ರಷ್ಟು ವಿದ್ಯುತ್ ಉಳಿತಾಯ ಆಗಲಿದೆ ಈ ಉಳಿತಾಯದ ಹಣ ಹೊಸ ಬೀದಿ ದೀಪಗಳ ಅಳವಡಿಕೆಗೆ ಖರ್ಚಾಗಲಿದೆ
ಒಟ್ಟಾರೆ ನಗರದ ವಿದ್ಯುತ್ ಕಂಬಗಳಿಗೆ ಹೊಸ ದೀಪಗಳ ಭಾಗ್ಯ ಒದಗಿ ಬಂದಿದ್ದು ಉಪ ಚುನಾವಣೆ ಮುಗಿಯುವವರೆಗೂ ಕಾಯಬೇಕಾಗಿದೆ ಶಶಿಧರ ಕುರೇರ ಸ್ಮಾರ್ಟ್ ಸಿಟಿ ಯೋಜನೆಯ ಎಂ ಡಿ ಆದಾಗಿನಿಂದ ಕಾಮಗಾರಿಗಳು ವೇಗ ಪಡೆದುಕೊಂಡಿವೆ
ಬೆಳಗಾವಿ ನಗರದ ಎಲ್ಲ ಬೀದಿಗಳಿಗೆ ಹೊಸ ಬೆಳಕು