ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿರುವದನ್ನು ಗಂಭೀರವಾಗ ಪರಗಣಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ ಸಿಂಗ್ ಹಾಗು ನಗರಾಭಿವೃದ್ಧಿ ಕಾರ್ಯದರ್ಶಿ ಪುನ್ನುರಾಜ ಅವರು ಇಂದು ಬೆಳಗಾವಿ ಪಾಲಿಕೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು
ಸಭೆಯಲ್ಲಿ ಸಂಸದ ಸುರೇಶ ಅಂಗಡಿ,ಶಾಸಕ ಫಿರೋಜ್ ಸೇಠ ಮತ್ತು ಪಶಲಿಕೆ ಆಯುಕ್ತ ಶಶಿಧರ ಕುರೇರ ಬುಡಾ ಆಯುಕ್ತರು ಹಾಗು ಸ್ಮಾರ್ಟ ಸಿಟಿ ಯೋಜನೆಯ CEO ಮೋಹಾಲಿನ್ ಸಭೆಯಲ್ಲಿ ಭಾಗವಹಿಸಿದ್ದರು
ಸ್ಮಾರ್ಟ ಸಿಟಿ ಯೋಜನೆಯ 400 ಕೋಟಿ ಅನುದಾನ ಬಿಡುಗಡೆ ಆಗಿದೆ ಈ ಅನುದಾನದ 25 ಲಕ್ಷ ರೂ ಬಡ್ಡಿ ಜಮಾ ಆಗಿದೆ ಆದರೆ ಇನ್ನುವರೆಗೆ ಕಾಮಗಾರಿಗಳು ಆರಂಭವಾಗಿಲ್ಲ ಜನರಿಗೆ ಉತ್ತರ ಕೊಡೋದು ಕಷ್ಟವಾಗಿದೆ ಎಂದು ಸಂಸದ ಸುರೇಶ ಅಂಗಡಿ ಮತ್ತು ಶಾಸಕ ಫಿರೋಜ್ ಸೇಠ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ತೀವ್ರ ಅಸಮಾಧಾನ ವ್ಯೆಕ್ತಪಡಿಸಿದರು
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ ಸಿಂಗ್ ಮಾತನಾಡಿ ಕೂಡಲೇ ಬೆಳಗಾವಿ ನಗರದಲ್ಲಿ ಸ್ಮಾರ್ಟ ಸಿಟಿ ಯೋಜನೆಯ ಕಾಮಗಾರಿಗಳು ಆರಂಭವಾಗಬೇಕು ರಾಮ ತೀರ್ಥ ನಗರದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲು ಕೂಡಲೇ DPR ಸಿದ್ಧಪಡಿಸಬೇಕು ಕೆವಲ ಏಜನ್ಸಿ ಮೇಲೆ ಅವಲಂಭಿತರಾಗದೆ ಸ್ವತಂತ್ರವಾಗಿ ಕ್ರಿಯಾಶೀಲರಾಗಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ಸ್ಮಾರ್ಟ ಸಿಟಿ ಯೋಜನೆಯಡಿಯಲ್ಲಿ ಏರಿಯಾಬೇಸ್ ಡೆವಲಪ್ಮೆಂಟ್ ಗೆ ಸಮಂಧಿಸಿದಂತೆ ರಾಮ ತೀರ್ಥ ನಗರದಲ್ಲಿ ಚರಂಡಿ,ರಸ್ತೆ,ಸೇರಿದಂತೆ ಎಲ್ಲ ಅಭಿವೃದ್ಧಿ ಕಾಮಗಾರಿಗಳ DPR ವಾರದಲ್ಲಿಯೇ ರೆಡಿಯಾಗೇಕು ಎಂದು ರಾಖೇಶ್ ಸಿಂಗ್ ಬೆಳಗಾವಿಯ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ
ಒಟ್ಟಾರೆ ಬೆಳಗಾವಿ ನಗರದಲ್ಲಿ ಶೀಘ್ರದಲ್ಲಿಯೇ ಸ್ಮಾರ್ಟ ಸಿಟಿ ಯೋಜನೆಯ ಶೆಕೆ ಆರಂಭವಾಗಲಿದೆ