ಬೆಳಗಾವಿ- ಬೆಳಗಾವಿ ನಗರ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಆಯ್ಕೆಯಾದ ಬಳಿಕ ಕೇಂದ್ರ ನಗರಾಭಿವೃದ್ಧಿ ಇಲಾಖೆ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯ ಪ್ರಗತಿ ಪರಶೀಲನೆ ನಡೆಸಲು ಮುಂದಾಗಿದೆ
ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಇಂದು ಮಧ್ಯಾಹ್ನ ಮೂರು ಘಂಟೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು ಪಾಲಿಕೆ ಆಯುಕ್ತ ಹಾಗು ಸ್ಮಾರ್ಟ್ ಸಿಟಿ ಯೋಜನೆಯ ವ್ಯೆವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರು ಯೋಜನೆಯ ಪ್ರಗತಿಯ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಿದ್ದಾರೆ
ಸ್ಮಾರ್ಟ ಸಿಟಿ ಯೋಜನೆಗೆ ಸಮಂಧಿಸಿದಂತೆ ಕೇಂದ್ರ ಸರ್ಕಾರ 200 ಕೋಟಿ ರಾಜ್ಯ ಸರ್ಕಾರ 200 ಕೋಟಿ ಅನುದಾನ ಬಿಡುಗಡೆ ಮಾಡಿದೆ ಆದರೆ ಇನ್ನುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಯೋಜನೆ ರೂಪಿಸುವ ಗುತ್ತಿಗೆ ಪಡೆದಿರುವ ಲೆಹರ್ ಕಂಪನಿ ಕವದಿ ಹೊತ್ತು ಮಲಗಿಕೊಂಡಿದೆ ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವದು ಯೋಜನೆಯ ದಿಕ್ಸೂಚಿಯಾಗಲಿದೆ
ಲೆಹರ್ ಕಂಪನಿಯ ಪ್ರತಿನಿಧಿಗಳು ನಿನ್ನೆ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು ಸಭೆಯಲ್ಲಿ ಕಂಪನಿಯ ವಿಳಂಬ ನೀತಿಯ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಪಾಲಿಕೆ ಆಯುಕ್ತರು ಕಂಪನಿಯ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕ್ರಿಮಿನಲ್ ಕೇಸ್ ಹಾಕುವದಾಗಿ ಎಚ್ಚರಿಕೆ ನೀಡಿದ್ದರು
ಈ ಬೆಳವಣಿಗೆಯ ಬೆನ್ನಲ್ಲಿಯೇ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ನಡೆಸುತ್ತಿರುವ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ