ಸ್ಮಾರ್ಟ್ ಸಿಟಿ ನೂರೆಂಟು ವಿಘ್ನಗಳು ದೂರ ಡಿ 4 ರಿಂದ ಕಾಮಗಾರಿ ಆರಂಭ
ಬೆಳಗಾವಿ-ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಶಶಿಧರ ಕುರೇರ ಅವರ ವಿಶೇಷ ಪ್ರಯತ್ನದ ಫಲವಾಗಿ ಸ್ಮಾರ್ಟ್ ಸಿಟಿ ಯೋಜನೆಯ ನೂರೆಂಟು ವಿಘ್ನಗಳು ದೂರಾಗಿದ್ದು ಡಿಸೆಂಬರ ನಾಲ್ಕರಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಸ್ಮಾರ್ಟ್ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ
ಡಿಸೆಂಬರ್ 4 ರಂದು ಕೆಪಿಟಿಸಿಎಲ್ ಹಾಲ್ ಎದುರಿನ ರಸ್ತೆ ಮಂಡೊಳ್ಳಿ ರಸ್ತೆ ಹಾಗು ವ್ಯಾಕ್ಸೀನ್ ಡಿಪೋ ದಲ್ಲಿ ಎರಡು ಚೆಕ್ ಡ್ಯಾಮ್ ಗಳ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ
22.80 ಕೋಟಿ ರೂ ವೆಚ್ಚದಲ್ಲಿ ಮಂಡೊಳ್ಳಿ ರಸ್ತೆ ಮತ್ತು ಕೆಪಿಟಿಸಿಎಲ್ ರಸ್ತೆ ಕಾಮಗಾರಿ ನಡೆಯಲಿದೆ 3.80 ಕೋಟಿ ರೂ ವೆಚ್ವದಲ್ಲಿ ವ್ಯಾಕ್ಸೀನ್ ಡಿಪೋ ಹೇರಿಟೇಜ್ ಪಾರ್ಕಿನಲ್ಲಿ3.80 ಕೋಟಿ ರೂ ವೆಚ್ಚದಲ್ಲಿ ಚೆಕ್ ಡ್ಯಾಮ್ ಗಳ ನಿರ್ಮಾಣ ಮಾಡಲಾಗುತ್ತಿದೆ ಮುಂಬೈ ಮೂಲದ ಪ್ರಿಮಿಯರ್ ಕನ್ಸಟ್ರಕ್ಷನ್ ಕಂಪನಿ ಕಾಮಗಾರಿ ನಿಭಾಯಿಸಲಿದೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದಲ್ಲಿ ಕಮಾಂಡ್ ರೂಮ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಐದು ಕೋಟಿ ರೂ ವೆಚ್ವದಲ್ಲಿ ಕಣಬರ್ಗಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ .ಬಸ್ ಸೆಲ್ಟರ್,ಬಸ್ ಬೇ,ವಾಟರ್ ಕಿಯೋಸ್ಕ, ಸೈಕಲ್ ಟ್ರ್ಯಾಕ್, ರೇನ್ ಹಾರ್ವೇಸ್ಟಿಂಗ್ ಪಾಯಿಂಟ್ ಗಳ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು ಸ್ಮಾರ್ಟ ಸಿಟಿ ಯೋಜನೆಯಡಿಯಲ್ಲಿ ಹತ್ತು ಹಲವು ಕಾಮಗಾರಿಗಳಿಗೆ ಶೀಘ್ರದಲ್ಲಿಯೇ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದಾರೆ
ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಟೆಂಡರ್ ಕರೆದು ಕಾಮಗಾರಿಗಳನ್ನು ಅಂತಿಮಗೊಳಿಸಿ ನಂತರ ಟೆಂಡರ್ ಪ್ರಕ್ರಿಯೆ ಮುಗಿಸಲು ಸಮಯ ಬೇಕಾಯಿತು ಡಿಸೆಂಬರ್ 4 ರಂದ ಎರಡು ರಸ್ತೆ ಮತ್ತು ಚೆಕ್ ಡ್ಯಾಮಗಳ ಕಾಮಗಾರಿಗಳು ಆರಂಭವಾಗಲಿದ್ದು ಇನ್ನೊಂದು ತಿಂಗಳಲ್ಲಿ ಒಂದಾದ ಮೇಲೆ ಮೊತ್ತೊಂದು ಕಾಮಗಾರಿಗಳು ಸರದಿಯಂತೆ ಆರಂಭವಾಗುತ್ತವೆ ಕಾಮಗಾರಿಗಳಿಗೆ ಅಡ್ಡಿಯಾಗಿದ್ದ ಅನೇಕ ತಾಂತ್ರಿಕ ಅಂಶಗಳನ್ನು ಸರಿಪಡಿಸಿಕೊಳ್ಳಲಾಗಿದೆ ಇನ್ನು ಮುಂದೆ ಕಾಮಗಾರಿಗಳು ವಿಳಂಬವಾಗುವ ಪ್ರಶ್ನೆಯೇ ಇಲ್ಲ ಎಂದು ಶಶಿಧರ ಕುರೇರ ತಿಳಿಸಿದ್ದಾರೆ
ಅಂತೂ ಇಂತೂ ನೂರೆಂಟು ವಿಘ್ನಗಳನ್ನು ದೂರು ಮಾಡಿ ಸ್ಮಾರ್ಟ್ ಸಿಟಿಯ ವಿಶೇಷ ಅಧಿಕಾರಿಯಾಗಿರುವ ಶಶಿಧರ ಕುರೇರ ತಮ್ಮ ಕರಾಮತ್ತು ತೋರಿಸುವಲ್ಲಿ ಯಶಸ್ವಿಯಾಗಿದ್ದು ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ ಸ್ಮಾರ್ಟ್ ಪರ್ವ ಆರಂಭ ವಾಗಲಿದೆ