ಬೆಳಗಾವಿ ಮಹಾನಗರದಲ್ಲಿ ಆರಂಭವಾಗಲ್ಲಿದೆ ಬೈಸಿಕಲ್ ಸರ್ವಿಸ್ ನೆಟ್ ವರ್ಕ್

ಬೆಳಗಾವಿ : ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬೆಳಗಾವಿ ಮಹಾನಗರ ಅತ್ಯಾಧುನಿಕ ಸವಲತ್ತುಗಳನ್ನು ಪಡೆಯುವ ಹೊಸ್ತಿಲಲ್ಲಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಬೈಸಿಕಲ್ ಸರ್ವಿಸ್ ನೆಟ್ ವರ್ಕ್ ಆರಂಭಿಸಲು ಬೆಳಗಾವಿ ಮಹಾನಗರ ಪಾಲಿಕೆ ನಿರ್ಧರಿಸಿದೆ.
ಬೈಸಿಕಲ್ ಸೇವೆ ಹೇಗಿರಬೇಕು, ಬೈಸಿಕಲ್ ಸೇಂಟರ್ ಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕು? ಒಟ್ಟಾರೆ ಈ ವ್ಯವಸ್ಥೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಗಾವಿ ನಗರ ನಿವಾಸಿಗಳು ಆಗಸ್ಟ್ 20ರೊಳಗಾಗಿ ತಮ್ಮ ಅಭಿಪ್ರಾಯಗಳನ್ನು ಪಾಲಿಕೆಯ ಸ್ಮಾರ್ಟ್ ಸಿಟಿ ಘಟಕಕ್ಕೆ ಸಲ್ಲಿಸಬಹುದಾಗಿದೆ ಎಂದು ಪಾಲಿಕೆಯ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ.

ಮೊಟರ್ ಸೈಕಲ್‌ ಗಳನ್ನು ಬಳಕೆ ಮಾಡದೆ ಬೈಸಿಕಲ್ ಗಳನ್ನು ಉಪಯೋಗಿಸುವವರಿಗೆ ಈ ವ್ಯವಸ್ಥೆ ಅತ್ಯಂತ ಅನುಕೂಲಕರವಾಗಲ್ಲಿದೆ. ನಗರದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವ ಸಾರ್ವಜನಿಕರು ಬೈಸಿಕಲ್ ಕೇಂದ್ರದಿಂದ ಸೈಕಲ್ ಪಡೆದು ತಾವು ಹೋಗುವ ಪ್ರದೇಶಕ್ಕೆ ತಲುಪಿ ಆ ಬೈಸಿಕಲ್ ವನ್ನು ಅಲ್ಲಿರುವ ಕೇಂದ್ರದಲ್ಲಿ ಜಮಾ ಮಾಡಬಹುದಾಗಿದೆ. ಪಾಲಿಕೆ ಬೈಸಿಕಲ್ ಬಾಡಿಗೆ ದರವನ್ನು ನಿಗದಿ ಮಾಡಲ್ಲಿದೆ. ಮೈಯಲ್ಲಿರುವ ಕಬ್ಬು ಕರಗಿಸಲು, ಹೊಟ್ಟೆ ಭಾರವನ್ನು ಕಡಿಮೆ ಮಾಡಿಕೊಳ್ಳಲು ನಗರ ನಿವಾಸಿಗಳು ಇನ್ನೂ ಮುಂದೆ ತಮ್ಮ ಮೊಟರ್ ಸೈಕಲ್‌ ಮನೆಯಲ್ಲಿಟ್ಟು ಸೈಕಲ್ ತುಳಿದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಮೂಲಕ ಪರಿಸರ ನೈರ್ಮಲ್ಯಕಾಪಾಡಿಕೊಳ್ಳಬಹುದಾಗಿದೆ.

ಪಾಲಿಕೆ ಆಯುಕ್ತರು ಈ ವಿನೂತನ ಯೋಜನೆಯನ್ನು ನಗರದಲ್ಲಿ ಅನುಷ್ಠಾನಗೊಳಿಸಲು ಮಹತ್ವದ ಯೋಜನೆ ರೂಪಿಸಿರುವುದು ಸಂತಸದ ಸಂಗತಿಯಾಗಿದೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *