ಬೆಳಗಾವಿ- ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಹಯೋಗದ ಸ್ಮಾರ್ಟ ಸಿಟಿ ಯೋಜನೆಯ ಪರ್ವ ಬೆಳಗಾವಿಯಲ್ಲಿ ಆರಂಭವಾಗಿದೆ ಈ ಯೋಜನೆಯಲ್ಲಿ ನಗರದ ಕೆಪಿಟಿಸಿಎಲ್ ರಸ್ತೆ ಮಂಡೊಳ್ಳಿ ರಸ್ರೆ ಕಾಮಗಾರಿಗೆ ಚಾಲನೆ ದೊರಕಿದ ಬೆನ್ನಲ್ಲಿಯೇ ಕಮಾಂಡ್ ಸೆಂಟರ್ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ
ಬೆಳಗಾವಿಯ ವಿಶ್ವೇಶರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದೆ 46 ಕೋಟಿ ರೂ ವೆಚ್ಚದಲ್ಲಿ ಈ ಸೆಂಟರ್ ನಿರ್ಮಾಣವಾಗುತ್ತಿದೆ ಮೂರು ಕೋಟಿ ರೂ ವೆಚ್ಚದಲ್ಲಿ ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣಗೊಳ್ಳಲಿದೆ
ಭಾರತ ಇಲೆಕ್ಟ್ರಾನಿಕ್ ಲಿಮಿಟೆಡ್ BEL ಕಂಪನಿಗೆ ಕಮಾಂಡ್ ಸೆಂಟರ್ ನಿರ್ಮಾಣದ ಗುತ್ತಿಗೆ ದೊರೆತಿದೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಹಾಗು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ
ವಿಶ್ವೇಶರಯ್ಯ ನಗರದಲ್ಲಿ ನಿರ್ಮಾಣವಾಗುವ ಈ ಕಮಾಂಡ್ ಸೆಂಟರ್ ನಗರ ನೀರು ಸರಬರಾಜು ವ್ಯೆವಸ್ಥೆ ಸ್ವಚ್ಛತಾ ವ್ಯವಸ್ಥೆ , ತ್ತಾಜ್ಯ ವಿಲೇವಾರಿ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಎಲ್ಲ ವ್ಯೆವಸ್ಥೆಗಳ ಮೇಲೆ ನಿಗಾ ಇಡಲಿದ್ದು ಬೆಳಗಾ ನಗರದ ಎಲ್ಲ ಸೇವಾ ವ್ಯೆಸ್ಥೆಗಳು ಕಮಾಂಡ್ ಸೆಂಟರ್ ನಿಂದಲೇ ಕಂಟ್ರೋಲ್ ಮಾಡಲಾಗುತ್ತದೆ