ಪಿರ್ಯಾದಿ ಶ್ರೀ ಸಂಜೀವ ಕುಮಾರ ನವಲಗುಂದ ತಂದೆ: ಶಿವಲಿಂಗಪ್ಪಾ, ಸಾ: ಗಣೇಶ್ ನಗರ ಬೆಳಗಾವಿ ತಾ:ಜಿ: ಬೆಳಗಾವಿ ರವರು ಪ್ರೋಜಕ್ಟ್ ಮ್ಯಾನೇಜರ್, ಅಪೂರ್ವಾ ಕನ್ಸಟ್ರಕ್ಷನ ಕಂ. ವತಿಯಿಂದ ಬೆಳಗಾವಿ ಸ್ಮಾರ್ಟ ಸಿಟಿ ಲಿ.ಯೋಜನೆಯಡಿ ನಿರ್ವಹಿಸಿದ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿಯ ಆರ್.ಎ-13 ಬಿಲ್ ಮಂಜೂರಿಸಲು ಮಾಡಲು, ಆಪಾದಿತ ನೌಕರ ಶ್ರೀ ಸಿದ್ದನಾಯ್ಕ ದೂಡಬಸಪ್ಪ ನಾಯ್ಕರ್, ಜನರಲ್ ಮ್ಯನೆಜರ್ ಟೆಕ್ನಿಕಲ್ ತಾಂತ್ರಿಕ, ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ಕಚೇರಿ, ಬೆಳಗಾವಿ ರವರು ಈ ಹಿಂದೆ ಪುಟಅಫ್ ಮಾಡಿದ ಆರ್.ಎ-12 ರ ಬಿಲ್ಲಿನ ಶೇಕಡಾ. 0.5 ರಷ್ಟು ಅಂದರೆ ರೂ.60.000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ದಿನಾಂಕ. 18.03.2021 ಲಂಚದ ಹಣವನ್ನು ರೂ.60,000/- ಗಳನ್ನು ಆಪಾದಿತ ಶ್ರೀ ಸಿದ್ದನಾಯ್ಕ ದೂಡಬಸಪ್ಪ ನಾಯ್ಕರ್, ಜನರಲ್ ಮ್ಯಾನೇಜರ್ ಟೆಕ್ನಿಕಲ್ ತಾಂತ್ರಿಕ, ಬೆಳಗಾವಿ ಸ್ಮಾರ್ಟ್ ಸಿಟಿ ಲಿ.ಕಚೇರಿ, ಬೆಳಗಾವಿ ರವರು ಮನೆಯಲ್ಲಿ ಸ್ವೀಕರಿಸುತ್ತಿರುವ ವೇಳೆಯಲ್ಲಿ ರೆಟ್ ಹ್ಯಾಂಡ್ ಆಗಿ ಸಿಕಿಬಿದ್ದಿರುತ್ತಾರೆ ಹಾಗೂ ಸದರಿ ಆರೋಪಿತ ನೌಕರರವರ ಮನೆಯಲ್ಲಿ ಶೋಧನೆ ನಡೆಸಲಾಗಿ ಅಕ್ರಮ ನಗದು ರೂ. 23,56,000/-ಗಳು ಪತ್ತೆಯಾಗಿರುತ್ತದೆ. ಸದರಿ ಆರೋಪಿತ ಅಧಿಕಾರಿಯು ಮುಖ್ಯ ಇಂಜಿನೀಯರ ಹುದ್ದೆಯ ಅಧಿಕಾರಿಯಾಗಿದ್ದು ಅವರನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಮುಂದುವರೆಸಿರುತ್ತದೆ.
ಸದರಿ ಪ್ರಕರಣವನ್ನು ಶ್ರೀ. ಬಿ. ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಶ ಜೆ.ಎಮ್.ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಠಾಣೆ, ಬೆಳಗಾವಿ ರವರು ದಾಖಲಿಸಿಕೊಂಡಿರುತ್ತಾರೆ. ಶ್ರೀ.ಎ.ಎಸ್ ಗುದಿಗೊಪ್ಪ, ಪೊಲೀಸ್ ಇನ್ಸ್‍ಪೆಕ್ಟರ್, ಹಾಗೂ ಶ್ರೀ ಹೆಚ್.ಸುನೀಲ್‍ಕುಮಾರ, ಪೊಲೀಸ್ ಇನ್ಸ್‍ಪೆಕ್ಟರ್, ಮತ್ತು ಬೆಳಗಾವಿ ಎಸಿಬಿ ಪೊಲೀಸ್ ಠಾಣೆ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ