ಬೆಳಗಾವಿ- ಬೆಳಗಾವಿ ನಗರವನ್ನು ಸ್ಮಾರ್ಟ್ ಮಾಡುವ ಕೆಲಸ ಸದ್ದಿಲ್ಲದೇ ನಡೆದಿದೆ ನಗರದ ಐದು ಕಡೆ ಜನನಿಬಿಡ ಪಾಯಿಂಟ್ ಗಳಲ್ಲಿ ಹೈಟೆಕ್ ವಾಟರ್ ಕಿಯೋಸ್ಕಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿತ್ತು ಈಗಾಗಲೇ ಟೆಂಡರ್ ಓಪನ್ ಆಗಿದ್ದು ಎರಡ್ಮೂರು ದಿನದಲ್ಲಿ ವರ್ಕ್ ಆರ್ಡರ್ ಇಸ್ಸ್ಯು ಆಗಲಿದೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಸ್ಮಾರ್ಟ್ ಕಿಯೋಸ್ಕಗಳನ್ನು ಅಳವಡಿಸಲಾಗುತ್ತಿದ್ದು ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂಬತ್ತು ಕೋಟಿ ರೂ ಅನುದಾನ ತೆಗೆದಿರಿಸಲಾಗಿದೆ
ಪ್ರಾಯೋಗಿಕವಾಗಿ ಕೇಂದ್ರ ಬಸ್ ನಿಲ್ಧಾಣ ರೈಲು ನಿಲ್ಧಾಣ,ಚನ್ನಮ್ಮ ವೃತ್ತ,ಧರ್ಮವೀರ ಸಂಬಾಜಿ ವೃತ್ತ ಹಾಗು ಆರ್ ಪಿ ಡಿ ವೃತ್ತದ ಬಳಿ ಸ್ಮಾರ್ಟ್ ವಾಟರ್ ಕಿಯೋಸ್ಕಗಳನ್ನು ಅಳವಡಿಸಲಾಗುತ್ತಿದ್ದು ನಂತರ ನಗರದ ವಿವಿಧ ಪ್ರದೇಶಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವದು ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಹಾಗು ಪಾಲಿಕೆ ಆಯುಕ್ತ ಶಶಿಧರ ಕುರೇರ ಬೆಳಗಾವಿ ಸುದ್ಧಿಗೆ ಮಾಹಿತಿ ನೀಡಿದ್ದಾರೆ
ಸ್ಮಾರ್ಟ್ ವಾಟರ್ ಕಿಯೋಸ್ಕ ವಿಶೇಷತೆ ಏನೆಂದರೆ ಇದರಲ್ಲಿ ಕೋಲ್ಡ ವಾಟರ್ ಹಾಟ್ ವಾಟರ್ ಎರಡೂ ಬರುತ್ತದೆ ಕ್ವಾಯಿನ್ ಹಾಕಿ ನೀರು ಪಡೆಯಬಹುದು ಕ್ವಾಯಿನ್ ಇಲ್ಲ ಅಂದ್ರೆ ಎಟಿಎಂ ಕಾರ್ಡ್ ಸ್ವಿಪ್ ಮಾಡಿ ನೀರು ಪಡೆಯಬಹುದಾಗಿದೆ
ಇದು ಸ್ವನಿರ್ವಹಣೆಯ ಸಾಮರ್ಥ್ಯ ಹೊಂದಿದ್ದು ಮಿನಿಮಮ್ ಮೇಂಟೇನನ್ಸ ಮಾಡಬೇಕಾಗುತ್ತದೆ ಪ್ರಾಯೋಗಿಕವಾಗಿ ಮೇಲ್ಕಾನಿಸಿದ ಸ್ಥಳಗಳಲ್ಲಿ ಇದು ಸೆಕ್ಸೆಸ್ ಆದ್ರೆ ಈ ಹೈಟೆಕ್ ವಾಟರ್ ಕಿಯೋಸ್ಕಗಳು ಗಲ್ಲಿ ಗಲ್ಲಿಗಳಿಗೆ ವಿಸ್ತರಣೆ ಆಗಲಿವೆ
ಸಾರ್ಟ್ ಸಿಟಿ ಯೋಜನೆಯಲ್ಲಿ ಕಣಬರ್ಗಿ ಕೆರೆಯನ್ನು ಸ್ಮಾರ್ಟ್ ಮಾಡುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಇದು ಕೂಡಾ ಮುಗಿಯಿವ ಹಂತದಲ್ಲಿದೆ ಐದು ಕೋಟಿ ರೂ ವೆಚ್ಚದಲ್ಲಿ ಕೆರೆಯ ದಂಡೆಯನ್ನು ಫಿನಿಶಿಂಗ್ ಮಾಡುವದು ಮ್ಯಾನುವಲ್ ,ಹಾಗು ಸೈಕ್ಲಿಂಗ್ ಬೋಟುಗಳನ್ನು ಕೆರೆಯಲ್ಲಿ ಬಿಡುವದು ಕೆರೆಯ ದಂಡೆಯ ಮೇಲೆ ಮಕ್ಕಳ ಮನರಂಜನೆಗಾಗಿ ವಿವಿಧ ಆಟಿಕೆ ಸಾಮುಗ್ರಿಗಳನ್ನು ಅಳವಡಿಸುವದು ಸೇರಿದಂತೆ ಕಣಬರ್ಗಿ ಕೆರೆಯನ್ನು ಐದು ಕೋಟಿ ರೂ ವೆಚ್ಚದಲ್ಲಿ ಫುಲ್ ಹೈಟೆಕ್ ಮಾಡಲು ಯೋಜನೆ ರೂಪಿಸಲಾಗಿದೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಕೆಪಿಟಿಸಿಎಲ್ ರಸ್ತೆ.ಮತ್ತು ಮಂಡೊಳ್ಳಿ ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿಸುವ ಕಾಮಗಾರಿ ಮತ್ತು ವ್ಯಾಕ್ಸೀನ್ ಡಿಪೋದಲ್ಲಿ ಚಿಕ್ಕ ಚಕ್ಕ ಡ್ಯಾಮ್ ನಿರ್ಮಿಸುವ ಕಾಮಗಾರಿಗಳು ನಡೆಯುತ್ತಿವೆ ಇನ್ನೊಂದು ವಾರದಲ್ಲಿ ಸ್ಮಾರ್ಟ್ ವಾಟರ್ ಕಿಯೋಸ್ಕ ಮತ್ತು ಕಣಬರ್ಗಿ ಕೆರೆಯನ್ನು ಸ್ಮಾರ್ಟ್ ಮಾಡುವ ಕಾಮಗಾರಿಗಳು ಆರಂಭವಾಗುವದು ನಿಶ್ಚಿತವಾಗಿದೆ