ಪುಣೆಯಿಂದ ಗರ್ಭಿಣಿ ಪತ್ನಿಯೊಂದಿಗೆ ರಾಜ್ಯಕ್ಕೆ ಆಗಮಿಸಲು ಕನ್ನಡಿಗ ಪರದಾಡಿದ ಘಟನೆ ನಿಪ್ಪಾಣಿ ಬಳಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಎಂಟು ತಿಂಗಳ ಗರ್ಭಿಣಿ ಪತ್ನಿ ಜೊತೆ ರಾಘವೇಂದ್ರ ಭಟ್ ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಧಮ್ಮಯ್ಯಾ ಅಂದ್ರೂ ಕರ್ನಾಟಕದ ಗಡಿ ಪ್ರವೇಶ ಮಾಡಲು ಅವಕಾಶ ಸಿಗಲಿಲ್ಲ.
ಆ್ಯಂಬುಲೆನ್ಸ್‌ನಲ್ಲಿ ಪುಣೆಯಿಂದ ಕೊಗನೊಳ್ಳಿ ಗೇಟ್‌ಗೆ ಆಗಮಿಸಿರುವ ದಂಪತಿ ನಾವು ಕುಮಟಾಗೆ ಹೋಗಬೇಕು ನಮಗೆ ಪುಣೆ ಜಿಲ್ಲಾಡಳಿತ ಪಾಸ್ ಕೊಟ್ಟಿದೆ ನೀವೂ ಕೊಡಿ ಎಂದು ಅಂಗಲಾಚಿದರೂ ಯಾರೊಬ್ಬರೂ ಕ್ಯಾರೆ ಅನ್ನಲಿಲ್ಲ
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದ ದಂಪತಿ ಬಂದ ದಾರಿಗೆ ಸುಂಕವಿಲ್ಲದೇ ಮರಳಿ ಪುಣೆಗೆ ಹೊರಟಿದ್ದರು ಪುಣೆಯ ಪಿಂಪರ್ ಚಿಂಚವಾಡ ಕಮಿಷನರ್ ಆಫೀಸ್‌ನಿಂದ ಅಂತಾರಾಜ್ಯ ಪಾಸ್ ತಂದಿರುವ ದಂಪತಿ ಸೇವಾ ಸಿಂಧು ಆ್ಯಪ್‌ನಲ್ಲಿ ಅಪ್ಲೈ ಮಾಡಿ ನಾಲ್ಕು ದಿನವಾದರೂ ನೋ ರಿಸ್ಪಾನ್ಸ್ ಸಿಕ್ಕಿರಲಿಲ್ಲ
ಪುಣೆಯ ಬಜಾಜ್ ಆಟೋ ಮನುಫ್ಯಾಕ್ಚರ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಆಗಿರುವ ರಾಘವೇಂದ್ರ ಭಟ್ ಕಳೆದ 11 ವರ್ಷಗಳಿಂದ ಪುಣೆಯಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ ಭಟ್ ಎಂಟು ತಿಂಗಳ ಗರ್ಭಿಣಿ ಪತ್ನಿ ಕವಿತಾ ಜೊತೆ ಪತಿ ರಾಘವೇಂದ್ರ ಭಟ್
ಹೇಗಾದರೂ ಮಾಡಿ ನಮಗೆ ಸಹಾಯ ಮಾಡಿ ಅಂತಾ ಅಂಗಲಾಚಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ..
ಈ ವಿಷಯ ಮಾದ್ಯಮಗಳ ಮೂಲಕ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ಗೊತ್ತಾಗುತ್ತಿದ್ದಂತೆಯೇ ರಾಘವೇಂದ್ರ ಭಟ್‌ಗೆ ಕರೆ ಮಾಡಿ ವಾಪಸ್ ಬರಲು ಹೇಳಿದ್ದು, ಪುಣೆಗೆ ವಾಪಸ್ ಆಗುತ್ತಿದ್ದ ದಂಪತಿ ತೆರಳುತ್ತಿದ್ದ ಆ್ಯಂಬುಲೆನ್ಸ್ ವಾಪಸ್ ರಾಜ್ಯದತ್ತ ಆಗಮಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಬೆಳಗಾವಿ ಗಡಿ ಪ್ರವೇಶಿಸಿ ಸ್ವಂತ ಗೂಡು ಸೇರಲಿದ್ದಾರೆ ಈ ದಂಪತಿ. ಮಾಧ್ಯಮ ಪ್ರತಿನಿಧಿಗಳಿಂದ ಸುದ್ದಿ ತಿಳಿದು ಸ್ವತಃ ತಾವೇ ರಾಘವೇಂದ್ರ ಭಟ್‌ಗೆ ಕರೆ ಮಾಡಿ ಸಹಾಯ ಮಾಡುವ ಮೂಲಕ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಮಾನವೀಯತೆ ಮೆರೆದಿದ್ದಾರೆ. ಸಂಕಷ್ಟದಲ್ಲಿದ್ದ ದಂಪತಿಗೆ ಸಹಾಯ ಮಾಡಿದ ಬೆಳಗಾವಿ ಎಸ್‌ಪಿಗೆ ನಮ್ಮದೊಂದು ಸಲಾಂ.