ಬೆಳಗಾವಿ-ಲಾಕ್ ಡೌನ್ ನಿಂದಾಗಿ ನೇಕಾರರು ತೀರಾ ಸಂಕಷ್ಟ ಎದುರಿಸುತ್ತಿದ್ದು,ನೇಕಾರರ ಉದ್ಯಮ ಕುಸಿದು ಬಿದ್ದಿದೆ ,ಸರ್ಕಾರ ಕೂಡಲೇ,ನೇಕಾರರಿಗೆ ವಿಶೇಷ ಪ್ಯಾಕೆಜ್ ಘೋಷಿಸಬೇಕು,ನೇಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು, ನೇಕಾರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ,ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು,ಆದ್ರೆ ಈ ಪ್ಯಾಕೇಜ್ ನೇಕಾರರ ಕೈ ತಲುಪುವ ಮುನ್ನವೇ ರಾಜ್ಯದಲ್ಲಿ ಕೊರೋನಾ ಹಾವಳಿ ಎದುರಾದ ಕಾರಣ ಈ ಪ್ಯಾಜೇಜ್ ನೇಕಾರರಿಗೆ ಸಿಗಲಿಲ್ಲ.
ನೇಕಾರರು ತಯಾರಿಸಿದ ಲಕ್ಷಾಂತರ ಸೀರೆಗಳು ಬೇಡಿಕೆ ಇಲ್ಲದೆ ನೇಕಾರರ ಮನೆಯಲ್ಲಿ ಸಂಗ್ರಹವಾಗಿದ್ದು, ಸರಕಾರವೇ ಸೀರೆಗಳನ್ನು ಖರೀಧಿಸಬೇಕು,ನೇಕಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಿ ಕಟ್ಟಡ ಕೂಲಿ ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳನ್ನು ನೇಕಾರ ಕೂಲಿ ಕಾರ್ಮಿಕರಿಗೂ ಕೊಡಬೇಕು ಎಂದು ಗುಂಜೇರಿ ಒತ್ತಾಯಿಸಿದರು.
ನೇಕಾರರಿಗೆ ರೈತರಂತೆ ಶೂನ್ಯ ಬಡ್ಡಿ ದರದಲ್ಲಿ ಸರಕಾರವು ಸುಮಾರು 3ಲಕ್ಷ ರು. ವರೆಗೆ ಸಾಲ ಕೊಡಬೇಕು.
ಜವಳಿ ಕ್ಷೇತ್ರದ ನಿಗಮಗಳು ಅನುದಾನವಿಲ್ಲದೆ, ಯೋಜನೆ ಇಲ್ಲದೆ ನಿಷ್ಕ್ರಿಯವಾಗಿವೆ. ಇವುಗಳನ್ನು ಪುನಶ್ಚೇತನಗೊಳಿಸಿ ಅನುದಾನ ನೀಡಿ ರಾಜ್ಯದ ನೇಕಾರರಿಂದಲೇ ಉತ್ಪಾದಿಸಿದ ಸೀರೆ, ಬಟ್ಟೆಗಳನ್ನು ಸರಕಾರದ ವಿವಿಧ ಇಲಾಖೆಗಳಾದ ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣ, ಪೊಲೀಸ್, ಸಾರಿಗೆ ಇಲಾಖೆಗೆ ನಿಗಮಗಳ ಮೂಲಕ ಖರೀದಿಸಲು ಸರಕಾರ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ನೇಕಾರ ಮಹಾಸಭಾ ವತಿಯಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಎರಡು ಕುಟುಂಬಗಳಿಗೆ ತಲಾ ಐದು ಸಾವಿರ ಪರಿಹಾರದ ಚಕ್ ವಿತರಿಸಿದರು.
ಸಂತೋಷ ಅತ್ತಿಮರದ, ಶಂಕರಣ್ಣಾ ಮುರುಡಿ, ಕೃಷ್ಣಾ ಕುಬೇರ, ವಿನೋದ ಬಂಗೋಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..