ಬೆಳಗಾವಿ- ನಾನು ನನ್ನ ಕ್ಷೇತ್ರದಲ್ಲಿ ತುಂಬಾ ಬ್ಯುಸಿ ಇದ್ದೇನೆ,ಯಾರ್ಯಾರೋ ಹೇಳಿಕೆ ಕೊಡ್ತಾರಂತ ನಾನು ಪ್ರತಿಕ್ರಿಯಸಲ್ಲ ,ಚೈಲ್ಡೀಶ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳಕರ ಟಾಂಗ್ ಕೊಟ್ಟಿದ್ದಾರೆ.
ತೈಲಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, ಮಾದ್ಯಮಗಳ ಜೊತೆ ಮಾತನಾಡಿದ ಅವರು,ಯುವರಾಜ್ ಕದಂ ಅವರನ್ನು ಎಪಿಎಂಸಿ ಅದ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಕೇಳಿದಾಗ ,ಇದೊಂದು ಬೇಜವಾಬ್ದಾರಿ ಹೇಳಿಕೆ.ಇದೊಂದು ಚೈಲ್ಡೀಶ್ ಹೇಳಿಕೆ ಈ ರೀತಿಯ ಹೇಳಿಕೆಗಳಿಗೆ ಉತ್ತರ ಕೊಡಲು ನನ್ನ ಹತ್ತಿರ ಸಮಯವೂ ಇಲ್ಲ ನನಗೆ ಇಂಟ್ರೆಸ್ಟೂ ಇಲ್ಲ ಎಂದು ಲಜ್ಷ್ಮೀ ಹೆಬ್ಬಾಳಕರ ಹೇಳಿದರು.
ಕಳೆದ ಬಾರಿ ಯುವರಾಜ ಕದಂ ಅವರನ್ನು ಅದ್ಯಕ್ಷ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಅವರು ಮಾತು ಕೊಟ್ಟಿದ್ದರು,ಕೊಟ್ಟ ಮಾತಿನಂತೆ ಯುವರಾಜ ಕದಂ ಎಪಿಎಂಸಿ ಅದ್ಯಕ್ಷರಾಗಿದ್ದಾರೆ.ಅದಕ್ಕೆ ಎಂ ಈ ಎಸ್ ನವರೂ ಸಾಥ್ ಕೊಟ್ಟಿದ್ದಾರೆ, ಬೇಕಾದ್ರೆ ಈ ಕುರಿತು ಸತೀಶ್ ಜಾರಕಿಹೊಳಿ ಅವರನ್ನೇ ಕೇಳಿ ಎಂದು ಹೆಬ್ಬಾಳಕರ ಹೇಳಿದ್ರು
ಪಕ್ಷದ ನಾಯಕರು ನನಗೆ ಬಹಳಷ್ಟು ಜವಾಬ್ದಾರಿ ಕೊಟ್ಟಿದ್ದಾರೆ,ಪಕ್ಷವನ್ನು ಸಂಘಟಿಸಿ,ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ.ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡೋದೊಂದೆ ನನ್ನ ಗುರಿ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.