Breaking News

ಕೊರೋನಾ ಸೊಂಕಿಗೆ ಬಲಿಯಾದವರ ಇಬ್ಬರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.

ಬೆಳಗಾವಿ- ಕೊರೋನಾ ಸೊಂಕಿನಿಂದ ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ ನಿನ್ನೆಯ ದಿನ ಇಬ್ಬರು ಮೃತಪಟ್ಟಿದ್ದು ಮೃತರ ಅಂತ್ಯಕ್ರಿಯೆ ಇನ್ನುವರೆಗೆ ನಡೆದಿಲ್ಲ

ನಿನ್ನೆ ಮದ್ಯಾಹ್ನ,ರಾಯಬಾಗ ಕುಡಚಿಯ 70 ವರ್ಷದ ವೃದ್ಧ, ನಿನ್ನೆ ಸಂಜೆ ಬೆಳಗಾವಿಯ ವೀರಭದ್ರನಗರದ 48 ವರ್ಷದ ವ್ಯೆಕ್ತಿ ಮೃತಪಟ್ಟಿದ್ದು ಇಬ್ಬರ ಶವಗಳನ್ನು,ಕೋವಿಡ್ ಮಾರ್ಗಸೂಚಿಯ ಪ್ರಕಾರ ಪ್ಯಾಕ್ ಮಾಡಲಾಗಿದೆ,ಆದ್ರೆ ಅಂತ್ಯಕ್ರಿಯೆ ಮಾಡೋದು ಯಾವಾಗ ಎಂದು ಮೃತರ ಕುಟುಂಬಸ್ಥರು ನಿನ್ನೆಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೇ ಕಾಯ್ದು ಕುಳಿತಿದ್ದಾರೆ.

ಈ ಕುರಿತು ಭೀಮ್ಸ್ ನಿರ್ದೇಶ ದಾಸ್ತಿಕೊಪ್ಪ ಅವರನ್ನು ವಿಚಾರಿಸಿದಾಗ,ಇಬ್ಬರ ಅಂತ್ಯಕ್ರಿಯೆ ಮಾಡುವಂತೆ DHO ಅವರಿಗೆ ಇನ್ ಫಾರ್ಮ ಮಾಡಿದ್ದೇವೆ ಬೆಳಗಾವಿಯ NGO ದವರು ಮೃತರ ಅಂತ್ಯಕ್ರಿಯೆ ಮಾಡುತ್ತಾರೆ.ರಾತ್ರಿ ಹೊತ್ತಿನಲ್ಲಿ ಅಂತ್ಯಕ್ರಿಯೆ ಮಾಡಲು ಸಾದ್ಯವಿಲ್ಲ ಹೀಗಾಗಿ ಅಂತ್ಯಕ್ರಿಯೆ ಇವತ್ತು ಮಾಡುತ್ತೇವೆ ಎಂದು ಹೇಳಿದ್ದಾರೆ.

ಮೃತರ ಅಂತ್ಯಕ್ರಿಯೆ ಆರೋಗ್ಯ ಇಲಾಖೆ ಮಾಡಬೇಕೋ,ಮಹಾನಗರ ಪಾಲಿಕೆಯವರು ಮಾಡಬೇಕೋ ಎನ್ನುವ ಕಿತ್ತಾಟದಿಂದ ಮೃತರ ಅಂತ್ಯಕ್ರಿಯೆಗೆ ವಿಳಂಬವಾಗುತ್ತಿದೆ,ಎನ್ನಲಾಗಿದ್ದು,ಮೃತರ ಕುಟುಂಬಸ್ಥರು ಮಾತ್ರ ಅಸಹಾಯಕರಾಗಿ ಅಂತ್ಯಕ್ರಿಯೆ ಯಾವಾಗ ಎಂದು ಕಾಯುತ್ತಿದ್ದಾರೆ.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *