ಬೆಳಗಾವಿ- ಉತ್ತರ ಕರ್ನಾಟಕದಾಗ ಗಟರ್ ಅಮಾಸಿ ಅಂದ್ರ ಫುಲ್ ಫೇಮಸ್ ಆದ್ರ ಈ ಬಾರಿಯ ಗಟರ್ ಅಮಾಸಿ ಲಾಕ್ ಡೌನ್ ದಾಗ ಸಿಕ್ಕ್ ಗೊಟಕ್ ಅಂತ್ರಿ ಯಪ್ಪಾ…..
ಇವತ್ತ ಸಂಡೇ ಚಿಕನ್ ಮಟನ್ ಪಾರ್ಟಿ ಮಾಡಬೇಕು,ಅಂತಾ ಬಾಳ ಜನ ಪ್ಲ್ಯಾನ್ ಮಾಡ್ಕೊಂಡಿದ್ರು,ಆದ್ರ ಇವತ್ತ ಬೆಳಗಾವ್ಯಾಗ ಖಡಕ್ ಲಾಕ್ ಡೌನ್ ಐತಿ,ಹಿಂಗಾಗಿ ಗಟರ್ ಅಮಾಸಿ ಮಾಡಾವ್ರ,ಚಿಕನ್ ಎಲ್ಲಿ ಸಿಗತೈತಿ,ಮಟನ್ ಎಲ್ಲಿ ಸಿಗತೈತಿ ಅಂತಾ ತಿರಗ್ಯಾಡಾಕತಾರ್ರೀಪಾ.
ಬೆಳಗಾವ್ಯಾಗ ಪೋಲೀಸ್ರು ಇವತ್ತ್ ಖಡಕ್ ಲಾಕ್ ಡೌನ್ ಮಾಡ್ಯಾರ್ರ,ಸಿಟ್ಯಾಗ ಯಾರೂ ತಿರಗ್ಯಾಡದ್ಹಂಗ ನಾಕಾ ಬಂದೀ ಮಾಡ್ಯಾರ್ ಬೆಳಗಾವಿ ಸಿಟಿ ಬಿಕೋ ಅನ್ನಾತೈತಿ,ಬಸ್ ಸ್ಟ್ಯಾಂಡ್ ಖಾಲಿ,ಖಾಲಿ ಆಗೈತಿ,ಮಾರ್ಕೇಟ್ ಬಂದ್ ಆಗೈತಿ,ರಿಕ್ಷಾ ಅಲ್ಲೊಂದ ಇಲ್ಲೊಂದ ಕಾಣಿಸಿದ್ರ ಪೋಲೀಸ್ರು ಲಾಠಿ ತೋರಿಸಿ ರಿಕ್ಷಾ ಗಳನ್ನು ಓಡಸಾಕತ್ಹಾರ….
ನಾಳೆ ಸೋಮವಾರ ಶ್ರಾವಣಮಾಸದ ಅಮಾಸಿ ಐತಿ ಇವತ್ತ್ ನೋಡಿದ್ರ ಖಡಕ್ ಲಾಕ್ ಡೌನ್ ಐತಿ ಹಿಂಗಾಗಿ ಗಟರ್ ಅಮಾಸಿ ಮಾಡಾವ್ರಿಗೆ ಬಾಳ ತ್ರಾಸ ಆಯ್ತು ನೋಡ್ರೀಪಾ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ