ಬೆಳಗಾವಿ- ಬೆಳಗಾವಿಯ ರೋಡ್ ಲೈನ್ಸ್ ಕಂಪನಿಯೊಂದು 50 ಸಾವಿರ ಬಾಡಿಗೆ ಪಡೆದು ಗುಜಾರಾತಿಗೆ ಮುಟ್ಟಿಸಬೇಕಾದ 25 ಟನ್ ಸಕ್ಕರೆಯನ್ನು ಗುಳುಂ ಮಾಡಿ ಮತ್ತೊಂದು ಟ್ರಾನ್ಸ್ ಪೋರ್ಟ್ ಕಂಪನಿಗೆ ಟೋಪಿ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಒಂದು ವಾರದ ಹಿಂದೆ ಕಾರವಾರದ ಸಕ್ಕರೆ ಕಾರ್ಖಾನೆ ಯೊಂದು 25 ಟನ್ ಸಕ್ಕರೆಯನ್ನು 50 ಸಾವಿರ ಬಾಡಿಗೆಗೆ ಗುಜರಾತ್ ಅಹ್ಮದಾಬಾದಿನ ಹಿಮಾಲಯ ಡ್ರಗ್ಸ್ ಕಂಪನಿಗೆ ಮುಟ್ಟಿಸುವ ಕೆಲಸವನ್ನು ಬೆಳಗಾವಿಯ ರಾಜಕಮಲ ಟ್ರಾನ್ಸಪೋರ್ಟ್ ಗೆ ಕೊಟ್ಟಿತ್ತು,ರಾಜಕಮಲ ಟ್ರಾನ್ಸ್ ಪೋರ್ಟ್ ನವರು ಈ ಕೆಲಸವನ್ನು ಬೆಳಗಾವಿಯ ಕಿಸ್ಮತ್ ಟ್ರಾನ್ಸ್ ಪೋರ್ಟ್ ಗೆ ಹಸ್ತಾಂತರ ಮಾಡಿತ್ತು.
ರಾಜಕಮಲ ಟ್ರಾನ್ಸ್ ಪೋರ್ಟಿನಿಂದ ಗುಜರಾತಿಗೆ 25 ಟನ್ ಸಕ್ಕರೆ ತಲುಪಿಸಬೇಕಾದ ಕಿಸ್ಮತ್ ಟ್ರಾನ್ಸ ಪೋರ್ಟ್ ಈಗ ಗುಜರಾತಿಗೆ ಸಕ್ಕರೆ ಮುಟ್ಟಿಸದೇ ವಂಚಿಸಿದ್ದಾರೆಂದು ಆರೋಪಿಸಿ ರಾಜಕಮಲ ಟ್ರಾನ್ಸ್ ಪೋರ್ಟಿನ ಪ್ರಶಾಂತ ಗಂಗಣ್ಣವರ ಅವರು ಕಿಸ್ಮತ್ ಟ್ರಾನ್ಸಪೋರ್ಟಿನ ಏಜೆಂಟ್ ಹಿದಾಯತುಲ್ಲಾ ಮೋಯೀನ್ ಮುಲ್ಲಾ,ಮತ್ತು ಗುಜರಾತಿನ ಅಮರಿಂದರ್ ತಾಜಾ,ಮತ್ತು ಖನಶ್ಯಾಮ್ ಗೋರಖ್ ವಿರುದ್ಧ ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ರಾಜಕಮಲ ಟ್ರಾನ್ಸ್ ಪೋರ್ಟ್ ನವರು ತಮಗೆ ದೊರೆತ ಬಾಡಿಗೆಯನ್ನು ಕಿಸ್ಮತ್ ಟ್ರಾನ್ಸ್ ಪೋರ್ಟ್ ಗೆ ಕೊಟ್ಟು ಮೋಸ ಹೋಗಿದ್ದು 50 ಸಾವಿರ ಬಾಡಿಗೆ ಕೊಟ್ಟು 25 ಟನ್ ಸಕ್ಕರೆ ಕೊಟ್ಟ ಕಾರವಾರದ ಸಕ್ಕರೆ ಕಾರ್ಖಾನೆ ಈಗ ಪರದಾಡುವಂತಾಗಿದೆ.
25 ಟನ್ ಸಕ್ಕರೆ ಹೋಗಿದ್ದೇಲ್ಲಿ ಎಂದು ಮಾಳಮಾರುತಿ ಠಾಣೆಯ ಪೋಲೀಸರು ತನಿಖೆ ಶುರು ಮಾಡಿದ್ದಾರೆ.