ಬೆಳಗಾವಿ- ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮಹಾರಾಷ್ಟ್ರದ ಸ್ವತ್ತು ಅಲ್ಲ,ಅವರೊಬ್ಬ ರಾಷ್ಟ್ರಪುರುಷರಾಗಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ಶಿವಾಜಿ ಮೂರ್ತಿಗಳ ಸ್ಥಾಪನೆಯ ವಿಷಯದಲ್ಲಿ,ಮಹಾರಾಷ್ಟ್ರದ ಕಾಂಟ್ರಿಬ್ಯುಶನ್ ಏನೂ ಇಲ್ಲ,ಅವರು ಇಲ್ಲಿಯ ಲೋಕಲ್ ವಿಷಯದಲ್ಲಿ ಮೂಗು ತೂರಿಸುವ ನೈತಿಕತೆ ಮಹಾರಾಷ್ಟ್ರಕ್ಕೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಹಾರಾಷ್ಟ್ರದ ನಾಯಕರಿಗೆ ತಿರಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಶಿವಾಜಿ ಮೂರ್ತಿಗಳಿವೆ,ಯಮಕನಮರಡಿ ಕ್ಷೇತ್ರದ ಕಡೋಲಿಯಲ್ಲಿ ನಾವೂ 50 ಲಕ್ಷ ರೂ ಖರ್ಚು ಮಾಡಿ ಬೃಹತ್ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ,ನಾನೂ 15 ಲಕ್ಷ ರೂ ಕೊಟ್ಟಿದ್ದೇನೆ,ಆವಾಗ ಮಹಾರಾಷ್ಟ್ರದವರು ನಾವು ದುಡ್ಡು ಕೊಡ್ತೇವಿ ಅಂತಾ ಮುಂದೆ ಬಂದ್ರಾ..? ಎಂದು ಪ್ರಶ್ನಿಸಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದಾಗ ಕೊಲ್ಹಾಪೂರದಲ್ಲಿ ಕಲ್ಲು ಬಿಳೋದು ಮಾಮೂಲಿ ಇದೇನು ಹೊಸದಲ್ಲ,ಮಹಾರಾಷ್ಟ್ರ ಸಣ್ಣ ವಿಷಯವನ್ನು ದೊಡ್ಡದಾಗಿ ಬಿಂಬಿಸುತ್ತಿದೆ ಎಂದು ಸತೀಶ್ ಜಾರಕಿಹೊಳಿ ಆಕ್ರೋಶ ವ್ಯೆಕ್ತ ಪಡಿಸಿದರು.
ಮನಗುತ್ತಿಯಲ್ಲಿ ಅಲ್ಲಿಯ ಹಿರಿಯರು ಸಭೆ ಮಾಡಿ ಇದೊಂದು ಲೋಕಲ್ ಸಮಸ್ಯೆ ಅದನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ,ಜಾಗೆಗೆ ಸಮಂಧಿಸಿದಂತೆ ಬಿನ್ನಾಭಿಪ್ರಾಯ ಬಂದಿದೆ ಅದನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ,ಇದರಲ್ಲಿ ಮಹಾರಾಷ್ಟ್ರ ನಾಯಕರ ಏನೂ ಕೆಲಸ ಇಲ್ಲ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮನಗುತ್ತಿಗೆ ಭೇಟಿ ಕೊಟ್ಟು ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ಮಾಡಿದ್ದಾರೆ,ಅದು ಬಗೆಹರಿಯುತ್ತದೆ,ಈ ವಿಷಯದಲ್ಲಿ ಮಹಾರಾಷ್ಟ್ರ ಮದ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪ್ರವಾಹದ ಕುರಿತು ಜಿಲ್ಲಾಡಳಿತಕ್ಕೆ ನಾವೂ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದೇವೆ.ಈ ಹಿಂದೆ ನಡೆದ ಪ್ರಮಾದಗಳು ಮರುಕಳಿಸದಂತೆ ನಿಗಾ ವಹಿಸುವಂತೆ ಮನವಿ ಮಾಡಿದ್ದೇವೆ ಬಿಜೆಪಿ ಸರ್ಕಾರ ಈ ಹಿಂದೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಐದು ಲಕ್ಷ ರೂ ಪರಿಹಾರ ಕೊಡುವದಾಗಿ ಪ್ರಚಾರ ಮಾಡಿತ್ತು ಆದರೆ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಸಿದ್ರಾಮಯ್ಯ ಯಡಿಯೂರಪ್ಪ ಇಬ್ಬರ ರಿಪೋರ್ಟ್ ಪಾಸಿಟಿವ್ ಬಂದಿದೆ ಹೀಗಾಗಿ ಅವರು ಒಂದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರಬಹುದು ಇಬ್ಬರೂ ಒಂದೇ ಆಸ್ಪತ್ರೆಯಲ್ಲಿ ಇರುವದರಿಂದ ಇಬ್ಬರ ಸಿದ್ದಾಂತಗಳು ಒಂದೇ ಆಗಲು ಸಾಧ್ಯವಿಲ್ಲ ರಾಜಕೀಯ ನಾಯಕರೇನು 24 ಗಂಟೆಯೂ ಜಗಳಾಡುವದಿಲ್ಲ ಅವರಿಗೂ ಪ್ರೀತಿ ಅನ್ನೋದು ಇರುತ್ತದೆ.ಯಡಿಯೂರಪ್ಪ ಸಿದ್ರಾಮಯ್ಯ ಒಂದೇ ಆಸ್ಪತ್ರೆಯಲ್ಲಿ ಇರುವದರಿಂದ ಪ್ರೀತಿಯಿಂದ ಮಾತಾಡಿರಬಹುದು,ರಾಜಕೀಯವಾಗಿ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ ಸಿದ್ರಾಮಯ್ಯ ಭೇಟಿ ಆದಾಗ ಏನು ಮಾತಾಡಿದ್ದೀರಿ ಎಂದು ಕೇಳಿ,ನಿಮಗೆ ಹೇಳ್ತೀನಿ ಎಂದು ಸತೀಶ್ ಜಾರಕಿಹೊಳಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ವಿನಯ ನಾವಲಗಟ್ಟಿ,ಸುನೀಲ ಹನಮಣ್ಣವರ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.