ಬೆಳಗಾವಿ- ನಾಳೆ ಗೌರಿ ಗಣೇಶ ಹಬ್ಬ,ವಿಘ್ನ ವಿನಾಯಕನ ಸ್ವಾಗತಕ್ಕೆ ಬೆಳಗಾವಿಯಲ್ಲಿ ಭರದ ಸಿದ್ಧತೆ ನಡೆದಿದೆ.ಬೆಳಗಾವಿ ಮಾರ್ಕೆಟ್ ನಲ್ಲಿ ಫುಲ್ ರಶ್ ಎಲ್ಲಿ ನೋಡಿದಲ್ಲಿ ಜನವೋ ಜನ
ಜಿಟಿ ಜಿಟಿ ಮಳೆಯ ನಡುವೆಯೂ ಜನ ಹಬ್ಬಕೆ ಜನ ಹೂವು, ಹಣ್ಣು,ಖರೀಧಿ ಮಾಡುತ್ತಿದ್ದಾರೆ,ಬೆಳಗಾವಿಯ ರವಿವಾರ ಪೇಟೆ,ಗಣಪತಿ ಬೀದಿ ,ಪಾಂಗುಳ ಗಲ್ಲಿ,ಕಂಬಳಿಕೂಟ,ಮಾರುತಿ ಗಲ್ಲಿ ಖಡೇಝಾರ್ ನಲ್ಲಿ ಜನ ಹಬ್ಬದ ಸಾಮುಗ್ರಿಗಳ ಖರೀಧಿಗಾಗಿ ಮುಗಿಬಿದ್ದಿದ್ದಾರೆ.
ಕೊರೋನಾ ಸಂಕಷ್ಟ,ಜಿಟಿ ಜಿಟಿ ಮಳೆಯ ನಡುವೆಯೂ ಜನರ ಉತ್ಸಾಹ ಕುಗ್ಗಿಲ್ಲ,ಲಂಭೋಧರ ಎಲ್ಲ ಸಂಕಷ್ಟಗಳನ್ನು ನಿವಾರಿಸುತ್ತಾನೆ.ಎಲ್ಲ ವಿಘ್ನಗಳಿಂದ ಕಾಪಾಡುತ್ತಾನೆ,ಎಂಬ ನಂಬಿಕೆಯಿಂದ ಭಕ್ತರು ವಿನಾಯಕನ ಸ್ವಾಗತಕ್ಕೆ ಶ್ರದ್ಧೆ ಭಕ್ತಿಯಿಂದ ಸಿದ್ಧತೆ ನಡೆಸಿದ್ದಾರೆ
ಮೂರ್ತಿ ಎತ್ತರದ ಕುರಿತು ಗೊಂದಲ
ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ 4 ಅಡಿಗಿಂತ ಎತ್ತರ ಇರಬಾರದು ಎನ್ನುವ ಸರ್ಕಾರದ ಮಾರ್ಗಸೂಚಿ ಇದೆ,ಆದ್ರೆ ಬೆಳಗಾವಿ ನಗರಕ್ಕೆ 4 ಅಡಿಗಿಂತಲೂ ಎತ್ತರವಿರುವ ಗಣೇಶ ಮೂರ್ತಿಗಳು ಬಂದಿವೆ,ನಾವು ಆರು ತಿಂಗಳ ಹಿಂದೆಯೇ ಎತ್ತರದ ಗಣೇಶ ಮೂರ್ತಿ ಸಿದ್ಧಪಡಿಸಲು ಆರ್ಡರ್ ಮಾಡಿದ್ದೇವೆ,ಕೊನೆಯ ಘಳಿಗೆಯಲ್ಲಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದರೆ ಅದನ್ನು ಪಾಲಿಸಲು ಸಾಧ್ಯವಿಲ್ಲ ಎನ್ನುವದು ಗಣೇಶ ಮಂಡಳಗಳ ಅಂಬೋಣವಾಗಿದೆ
ಗಣೇಶ ಮೂರ್ತಿಗಳ ಎತ್ತರದ ಕುರಿತು ಗಣೇಶ ಮಂಡಳದ ಪದಾಧಿಕಾರಿಗಳು ಮತ್ತು ಪೋಲೀಸರ ನಡುವೆ ತಾನಾಜಿ ಗಲ್ಲಿಯಲ್ಲಿ ವಿವಾದ ನಡೆಯುತ್ತಿದೆ. ಸರ್ಕಾರದ ನಿಯಮ ಇದೆ ಅದನ್ನು ಪಾಲಿಸಲೇ ಬೇಕು ಎಂದು ಪೋಲೀಸರು ಹೇಳುತ್ತಿದ್ದಾರೆ,ಕೊನೆಘಳಿಗೆಯಲ್ಲಿ ಕಡಿಮೆ ಎತ್ತರ ಇರುವ ಮೂರ್ತಿ ತರುವದಾದರೂ ಎಲ್ಲಿಂದ,ಎನ್ನುವದು ಗಣೇಶ ಮಂಡಳದ ಪದಾಧಿಕಾರಿಗಳ ಪ್ರಶ್ನೆಯಾಗಿದೆ.