ಬೆಳಗಾವಿ-ಬ್ರಿಟೀಷ್ ಕಲೆಕ್ಟರ್ ಥ್ಯಾಕರೆಯ ರುಂಡಚಂಡಾಡಿ ಕ್ರಾಂತಿಯ ನೆಲದಲ್ಲಿ ವಿಜಯದ ಪತಾಕೆ ಹಾರಿಸಿದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಧೈರ್ಯ ಶೌರ್ಯ,ವನ್ನು ಬಿಂಬಿಸುಸುವ ಐತಿಹಾಸಿಕ ಕಿತ್ತೂರು ಉತ್ಸವವನ್ನು ಇಂದು ಕ್ರಾಂತಿಯ ನೆಲ ಕಿತ್ತೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ.
ಕೋವೀಡ್ ಹಿನ್ನಲೆಯಲ್ಲಿ, ಈ ಬಾರಿ ಸರಳ,ಸಾಂಕೇತಿಕವಾಗಿ,ಮೂರು ದಿನದ ಬದಲು ಕೇವಲ ಒಂದೇ ದಿನ ಆಚರಣೆ ಮಾಡಲಾಗುತ್ತಿದೆ.ಇಂದು ಕಿತ್ತೂರಿನಲ್ಲಿ ವೀರರಾಣಿ ಚನ್ನಮ್ಮಾಜಿಯ ವಿಜಯಜ್ಯೋತಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಚಾಲನೆ ಸಿಗಲಿದೆ
ಸ್ಥಳೀಯ ಜನಪ್ರತಿನಿಧಿಗಳು ವಿಜಯಜ್ಯೋತಿಯನ್ನು ಸ್ವಾಗತ ಮಾಡಿಕೊಳ್ಳಲಿದ್ದಾರೆ.ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡುವ ಕಿತ್ತೂರು ಉತ್ಸವದ ಮೇಲೆ ಕೊರೋನಾ ಕರಿನೆರಳು ಬಿದ್ದಿದೆ.ಹೀಗಾಗಿ ಈ ಬಾರಿಯ ಉತ್ಸವ ಸಾಂಕೇತಿಕವಾಗಿದೆ.
ಕಿತ್ತೂರು ಪ್ರಾಧಿಕಾರಕ್ಕೆ ಅನುದಾನ ಸಿಗಲಿ- ಹಬೀಬ್ ಶಿಲ್ಲೇದಾರ್
ಐತಿಹಾಸಿಕ ಕಿತ್ತೂರು ಪಟ್ಟಣ ಅಭಿವೃದ್ಧಿಯಾಗಬೇಕಾಗಿದೆ.ಚನ್ನಮ್ಮಾಜಿಯ ಜನ್ಮಸ್ಥಳ,ಕಾಕತಿ,ಮತ್ತು ಬೈಲಹೊಂಗಲದಲ್ಲಿರುವ,ರಾಣಿ ಚನ್ನಮ್ಮನ ಸಮಾಧಿ ಅಭಿವೃದ್ಧಿಯಾಗಬೇಕಿದ್ದು ಸರ್ಕಾರ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೂರು ಕೋಟಿ ವಿಶೇಷ ಅನುದಾನ ನೀಡಬೇಕು,ಜೊತೆಗೆ ಸಂಗೂಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಯ ನಿರ್ಮಾಣದ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಕೂಡಲೇ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಈ ಬಾರಿಯ ಕಿತ್ತೂರು ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕಿತ್ತೂರು ಕ್ಷೇತ್ರದ ಸಮಾಜ ಸೇವಕ,ಹಬೀಬ್ ಶಿಲ್ಲೇದಾರ ಒತ್ತಾಯಿಸಿದ್ದಾರೆ.