ಬೆಳಗಾವಿ-ಇಂದು ರಾಜ್ಯೋತ್ಸವ,ಕನ್ನಡಿಗರ ಹಬ್ಬ,ಈ ದಿನ ಕೋವೀಡ್ ಹಿನ್ನಲೆಯಲ್ಲಿ ಅನೇಕ ನಿರ್ಬಂಧ ಇದ್ದರೂ ಸಹ ,ಹಬ್ಬದ ಅದ್ದೂರಿ ತನಕ್ಕೆ ಅದು ಅಡ್ಡಿಯಾಗಲಿಲ್ಲ,ಅಭಿಮಾನದ ಕೊರತೆ ಕಾಣಲಿಲ್ಲ,ಬೆಳಗಾವಿಯ ಕಣ,ಕಣವೂ ಕನ್ನಡ ಕನ್ನಡ ಎನ್ನುವ ವಾತಾವರಣ ಬೆಳಗಾವಿಯಲ್ಲಿ ಕಂಡಿತು.
ಸುರ್ಯೋಧಯ ಆಗುವದಷ್ಟೇ ತಡ ಕನ್ನಡದ ಅಭಿಮಾನಿಗಳು ಝೇಂಡಾ ಹಾರಿಸುತ್ತ,ಜೈ ಕರ್ನಾಟಕ ಎಂದು ಘೋಷಣೆ ಕೂಗುತ್ತ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡರು
ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಹೂವಿನ ಹಾರಹಾಕಿ ಗೌರವ ಸಮರ್ಪಿಸುವ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತುಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳು ರಾರಾಜಿಸಿದವು,ಕನ್ನಡದ ಪವರ್ ಇಂದು ಬೆಳಗಾವಿಯಲ್ಲಿ ಸದ್ದು ಮಾಡಿತು.
ಚನ್ನಮ್ಮನ ವೃತ್ತದಲ್ಲಿ ತಂಡೋಪ ತಂಡವಾಗಿ ಆಗಮಿಸಿದ ತಾಯಿ ಭುವನೇಶ್ವರಿಯ ಭಕ್ತರು ಕನ್ನಡದ ತೇರು ಎಳೆಯುವ ಮೂಲಕ ಕನ್ನಡದ ಹಬ್ಬವನ್ನು ಭಕ್ತಿಯಿಂದ ಆಚರಿಸಿ,ಬೆಳಗಾವಿ ಎಂದೆಂದಿಗೂ ಕನ್ನಡದ ನೆಲ ಎನ್ನುವ ಸಂದೇಶ ಸಾರಿದರು.
ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಅವರು ಚನ್ನಮ್ಮಾಜಿಯ ಮೂರ್ತಿಗೆ ಮಾಡಿದ ಆಕರ್ಷಕ ಕಲಾವರಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.