ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಳೆದ ಒಂದು ತಿಂಗಳಿನಿಂದ ನಡೆದಿರುವ ಗುದ್ದಾಟಕ್ಕೆ ಇಂದು ಹನ್ನೊಂದು ಗಂಟೆಗೆ ತೆರೆ ಬೀಳಲಿದೆ
ನಿನ್ನೆ ರಾತ್ರಿ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಎರಡು ಗಂಟೆಗಳ ಕಾಲ ಬಿಜೆಪಿ ನಾಯಕರು ಮೀಟೀಂಗ್ ಮಾಡಿ,ಕರಾರು ಒಪ್ಪಂದಗಳ ಮೂಲಕ ಒಮ್ಮತಕ್ಕೆ ಬಂದಿದ್ದು ಇಂದು 10-30 ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಚ ಉಪಾದ್ಯಕ್ಷರ ಹೆಸರುಗಳನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ.
ನಿನ್ನೆ ರಾತ್ರಿ ಮೀಟೀಂಗ್ ಮುಗಿದ ಬಳಿಕ ಉಮೇಶ್ ಕತ್ತಿ ಅವರ ನಗು,ಮತ್ತು ಮುಖದ ಮೇಲಿನ ಕಳೆ ನೋಡಿದ್ರೆ,ರಮೇಶ್ ಕತ್ತಿ ಅವರೇ ಮತ್ತೆ ಅದ್ಯಕ್ಷರಾಗಬಹುದು,ಎನ್ನುವ ಲಕ್ಷಣ ಗಳು ಕಾಣಿಸುತ್ತಿವೆ.ಉಪಾದ್ಯಕ್ಷರಾಗಿ ಶಿವಾನಂದ ಡೋಣಿ,ರಾಜೇಂದ್ರ ಅಂಕಲಗಿ ಅಥವಾ ಮಹಾಂತೇಶ್ ದೊಡ್ಡಗೌಡ್ರ ಈ ಮೂವರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ.ಕೊನೆಯ ಕ್ಷಣದಲ್ಲಿ ಉಲ್ಟಾಪಲ್ಟಿ ಆದ್ರೂ ಅಚ್ಚರಿ ಪಡಬೇಕಾಗಿಲ್ಲ.ಯಾಕಂದ್ರೆ ಬೆಳಗಾವಿ ಜಿಲ್ಲೆಯ ರಾಜಕಾರಣದ ನಿಗೂಢತೆಯನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.ನಾವೆಲ್ಲ ಈಗಲೂ ಒಂದಾಗಿದ್ದೇವೆ .ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತೆವೆ.ಲಕ್ಷ್ಮಣ ಸವದಿ,ಉಮೇಶ್ ಕತ್ತಿ,ಬಾಲಚಂದ್ರ ಅವರು ,ಬ್ರಹ್ಮ ವಿಷ್ಣು,ಮಹೇಶ್ವರ ಇದ್ಹಂಗೆ ನಿರ್ದೇಶಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು,ಒಮ್ಮತದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ನಿನ್ನೆ ರಾತ್ರಿ ಮೀಟೀಂಗ್ ಮುಗಿದ ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ರು..
ನಿನ್ನೆ ರಾತ್ರಿ ಸರ್ಕ್ಯುಟ್ ಹೌಸ್ ನಲ್ಲಿ ನಡೆದ ಮೀಟೀಂಗ್ ನಲ್ಲಿ ಡಿಸಿಎಂ ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ,ಉಮೇಶ್ ಕತ್ತಿ,ರಮೇಶ್ ಕತ್ತಿ,ಅಣ್ಣಾಸಾಹೇಬ್ ಜೊಲ್ಲೆ,ಈರಣ್ಣಾ ಕಡಾಡಿ,ಆನಂದ ಮಾಮನಿ,ಮಹಾಂತೇಶ್ ಕವಟಗಿಮಠ ಅವರು ಭಾಗವಹಿಸಿದ್ದರು.
ಬೆಳಗಾವಿ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಅವಿರೋಧ ಆಯ್ಕೆಯಿಂದ ಹಿಡಿದು ಇಲ್ಲಿಯವರೆಗೆ ಬಾಲಚಂದ್ರ ಜಾರಕಿಹೊಳಿ ಅವರೇ ಕಿಂಗ್ ಮೇಕರ್ ಅನ್ನೋದು ಸ್ಪಷ್ಟವಾಗುತ್ತದೆ.ಡಿಸಿಸಿ ಬ್ಯಾಂಕಿಗೆ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಲು ಬಾಲಚಂದ್ರ ಜಾರಕಿಹೊಳಿ ಅವರು ಮಾಡಿದ ಶ್ರಮವೇ ಅದಕ್ಕೆ ಕಾರಣ,ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿಯಲ್ಲೇ ಠಖಾಣಿ ಹೂಡಿ ಎಲ್ಲರನ್ನು ಮಾತಾಡಿಸಿ,ಸಮಾಧಾನ ಹೇಳಿ ಸಂಧಾನ ಮಾಡಿಸಿದ ಪರಿಣಾಮವೇ ಹದಿಮೂರು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಇವತ್ತು ನಡೆಯುವ ಅದ್ಯಕ್ಷ ಉಪಾದ್ಯಕ್ಷರ ಆಯ್ಕೆಯಲ್ಲೂ ಬಾಲಚಂದ್ರ ಜಾರಕಿಹೊಳಿ ಅವರೇ ಮುಖ್ಯ ಸೂತ್ರಧಾರಿ,ಅವರೇ ಕಿಂಗ್ ಮೇಕರ್.