Breaking News

ಇತ ನಿಜವಾಗಿಯೂ ಬೆಳಗಾವಿಯ ಭಜರಂಗಿ ಭಾಯಿಜಾನ್..!!!!

ಬೆಳಗಾವಿ- ಬೆಳಗಾವಿ ಪಕ್ಕದ ಕಾಕತಿಯಲ್ಲಿ ಭಜರಂಗಿ ಭಾಯಿಜಾನ್ ಹಿಂದಿ ಚಲನ ಚಿತ್ರ ಮಾದರಿಯ ಘಟನೆ ನಡೆದಿದೆ.ನಟ ಸಲ್ಮಾನ್ ಖಾನ್ ಪಾಕಿಸ್ತಾನದ ಬಾಲಕಿ ಮುನ್ನೀ ಯನ್ನು ಪಾಕಿಸ್ತಾನಕ್ಕೆ ತಲುಪಿಸಿದರೆ ಕಾಕತಿಯ ವಿನಾಯಕ ನೇಪಾಳಿ ಯನ್ನು ನೇಪಾಳಕ್ಕೆ ತಲುಪಿಸಿ ಬೆಳಗಾವಿಯ ಭಜರಂಗಿ ಭಾಯಿಜಾನ್ ಆಗಿದ್ದಾರೆ.

ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ಮಾತುಬಾರದ ಮೂಕಿ ಬಾಲಕಿಯೊಬ್ಬಳನ್ನು ನೆರೆಯ ಪಾಕಿಸ್ತಾನಕ್ಕೆ ಸೇರಿಸಲು ಪಟ್ಟ ಕಷ್ಟವನ್ನು ಎಳೆಎಳೆಯಾಗಿ ಚಿತ್ರಿಸಲಾಗಿದೆ. ಇಂತಹದ್ದೇ ಸಿನಿಮಾ ಮಾದರಿ ಘಟನೆಯೊಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದ್ದು, ಯುವಕನ್ನೊಬ್ಬ ನೆರೆಯ ರಾಷ್ಟ್ರ ನೇಪಾಳದ ಮಾತು ಬಾರದ ಮೂಕನೊಬ್ಬನನ್ನು ಆತನ ರಾಷ್ಟ್ರಕ್ಕೆ ಸೇರಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಭಜರಂಗಿ ಭಾಯಿಜಾನ್ ಚಿತ್ರರಂಗದಲ್ಲಿ ಧೂಳೇಬ್ಬಿಸಿದ ಚಿತ್ರ…ಇದರಲ್ಲಿ ನಟ ಸಲ್ಮಾನಖಾನ್ ತನ್ನ ಪೋಷಕರಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದ ಮೂಕ ಬಾಲಕಿ ಮುನ್ನಿಯನ್ನು ಮರಳಿ ಅವರ ತಾಯ್ನಾಡು ಪಾಕಿಸ್ತಾನಕ್ಕೆ ಬಿಟ್ಟು ಬರಲು ಸಲ್ಮಾನ್ ಖಾನ್ ಪಟ್ಟ ಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಈ ಚಿತ್ರ ನೋಡಿದವರು ಬೆಳಗಾವಿಯ ಕಾಕತಿಯಲ್ಲಿ ನಡೆದ ಸ್ಟೋರಿಯನ್ನು ಕೇಳಿದರೆ ಇದು ನಿಜಕ್ಕೂ ಭಜರಂಗಿ ಭಾಯಿಜಾನ್ 2ಎನ್ನುವುದರಲ್ಲಿ ಎರಡು ಮಾತಿಲ್ಲ…

ಈ.ಫೋಟೋದಲ್ಲಿರುವ ವ್ತಕ್ತಿಯ ಹೆಸರು ಗೊತ್ತಿಲ್ಲ.ಆದ್ರೆ ನೆರೆಯ ನೇಪಾಳದ ಪ್ರಜೆ. ಅದು ಹೇಗೆ ಇತ ಕರ್ನಾಟಕಕ್ಕೆ ಬಂದ ಅಂತ ಇಂದಿಗೂ ನಿಗೂಢವಾಗಿದೆ. ಅಂದ್ರೆ ಇತ ಮಾತುಬಾರದ ಮೂಕ. ಜೊತೆಗೆ ಅನಕ್ಷರಸ್ಥ.ಸುಮಾರು 32ವರ್ಷದ ಇತ 31ಡಿಸೆಂಬರ್ 2020ರಂದು ಮದ್ಯಾಹ್ನ 2ಗಂಟೆಗೆ ಬೆಳಗಾವಿ ಹೊರವಲಯದ ಬರ್ಡೆ ಡಾಭಾ‌ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದ.ಅನ್ನವಿಲ್ಲದೇ ನಡೆದು ನಡೆದು ಸುಸ್ತಾಗಿ ಮಲಗಿದ್ದ ಇತನನ್ನು ಗಮನಿಸಿದ ಕಾಕತಿ ಗ್ರಾಮದ ಯುವಕ ವಿನಾಯಕ್ ಕೇಸರಕರ್ ತನ್ನ ಬೈಕ್ ನಿಲ್ಲಿಸಿ, ನೀರು ಕುಡಿಸಿ, ಮಾತನಾಡಲು ಪ್ರಯತ್ನಿಸುತ್ತಾನೆ.ಆದರೂ ಆತ ಮಾತನಾಡೋದಿಲ್ಲ.ಅಕ್ಕ ಪಕ್ಕದವರ ಸಹಾಯದಿಂದ ಇತನನ್ನು ತನ್ನ ಮನೆಗೆ ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಾನೆ. ಒಂದು ಕೋಣೆಯಲ್ಲಿಟ್ಟು ಸ್ನಾನ ಮಾಡಿಸಿ, ವೈದ್ಯರಿಂದ ಉಪಚರಿಸಿ, ಜೂಸ್ ನೀಡಿ ರೆಸ್ಟ್ ಮಾಡಲು ಬಿಡ್ತಾನೆ. ಆ ಸಂದರ್ಭದಲ್ಲಿ ಇತನಿಗೆ ಹಲವು ನೇಪಾಳದ ಚಿತ್ರಗಳನ್ನ ತೋರಿಸಿದ್ದಾಗ ಅದನ್ನ ಗುರ್ತಿಸುತ್ತಾನೆ. ಅಲ್ಲಿರುವ ಕೆಲ ದೇವಸ್ಥಾನಗಳನ್ನ ನೋಡಿ, ನಮ್ಮ ದೇವರು ಅಂತಾನೆ. ಇತ ನೇಪಾಳದವನೇ ಅಂತ ತೀರ್ಮಾಣಕ್ಕೆ ಬಂದ ವಿನಾಯಕ್, ಇತನನ್ನು ಹೇಗಾದ್ರು ಮಾಡಿ ತನ್ನೂರಿಗೆ ಕಳುಹಿಸಿಕೊಡಬೇಕು ಅಂತ ಎಲ್ಲಿಲ್ಲ ಪ್ರಯತ್ನಕ್ಕೆ ಕೈಹಾಕುತ್ತಾನೆ.ಕಾಕತಿಯ ವಿನಾಯಕ್ ಕೇಸರಕರ.

ಕಾಕತಿಯ ವಿನಾಯಕ್ ಕೇಸರಕರ ದೆಹಲಿಯಲ್ಲಿರುವ ನೇಪಾಳದ ತನ್ನ ಸ್ನೇಹಿತ ಆಶೀಸ್ ಗೆ ಫೋನ್ ಮಾಡ್ತಾನೆ. ನಾನು ಬೆಳಗಾವಿಯಿಂದ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತಿದ್ದೇನೆ. ಅವನನ್ನು ನೇಪಾಳದ ಗಡಿವರೆಗೆ ಮುಟ್ಟಿಸಿ, ಸಾಧ್ಯವಾದ್ರೆ ಅವರ ಮನೆಗೆ ಮುಟ್ಟಿಸುವ ಕೆಲಸ ಮಾಡಿ ಅಂತ ಮನವಿ ಮಾಡುತ್ತಾನೆ.‌ಅದರಂತೆ 1_1_2021ರಂದು ಬೆಳಗಾವಿಯಿಂದ ಹೊರಡುವ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿಗೆ ಕಳುಹಿಸಿಕೊಡುತ್ತಾರೆ. ಮರುದಿನ ಅಂದ್ರೆ ಎರಡು ದಿನಗಳ ನಂತರ 3_1_2021ರಂದು ದೆಹಲಿ ತಲುಪಿದ ಈ ವ್ಯಕ್ತಿಯನ್ನು ಬರಮಾಡಿಕೊಂಡ ಆಶೀಸ್ ಎನ್ನುವ ವ್ಯಕ್ತಿ ಮುಂದೆ ನೇಪಾಳದ ಗಡಿವರೆಗೆ ಕರೆದುಕೊಂಡು ಹೋಗಿ ನಿನ್ನೆ ಬೆಳಿಗ್ಗೆ 7.30ಕ್ಕೆ ಗಡಿ ತಲುಪಿಸಿ ನೇಪಾಳಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಪೋಲಿಸರು ಈಗ ಈ ವ್ಯಕ್ತಿಯನ್ನು ಎನ್ ಜಿಓ ಮೂಲಕ ಮೂಕರ ಕೇಂದ್ರಕ್ಕೆ ತಾತ್ಕಾಲಿಕವಾಗಿ ಇರಿಸಿದ್ದು, ಮುಂದೆ ಇತನ ಕುಟುಂಬ ಹುಡುಗಿ ಅವರಿಗೆ ಒಪ್ಪಿಸುವ ಭರವಸೆಯನ್ನು ಫೋಲಿಸರು ನೀಡಿದ್ದಾರೆ.ಎಂದು ವಿನಾಯಕ್ ಕೇಸರಕರ.ತಿಳಿಸಿದ್ದಾರೆ.

ಮಾತು ಬಾರದ ಮೂಗನಿಗೆ ಕೊನೆಗೂ ತನ್ನ ರಾಷ್ಟ್ರಕ್ಕೆ ತಲುಪಿಸಿದ ತೃಪ್ತಿ ವಿನಾಯಕನಲ್ಲಿ ಮೂಡಿದೆ. ಕಷ್ಟಪಟ್ಟು ಮೂಗನೊಬ್ಬನನ್ನು ತನ್ನ ರಾಷ್ಟ್ರಕ್ಕೆ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾದ ವಿನಾಯಕನಿಗೆ ಪ್ರೀತಿಯಿಂದ ಜನರು ಭಜರಂಗಿ ಭಾಯಿಜಾನ್ ಅಂತಾನೇ ಕರೆಯಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ ವಿನಾಯಕನ‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *