ಬೆಳಗಾವಿ- ಗೋಕಾಕಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ, ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇಂದು ಸಂಜೆ ಈ ಉತ್ಸವವನ್ನು ಸಿಎಂ ಇಬ್ರಾಹೀಂ ಉದ್ಘಾಟಿಸಲಿದ್ದಾರೆ.
ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸುವ ಸಿಎಂ ಇಬ್ರಾಹೀಂ, ಸಂಜೆ ಗೋಕಾಕಿಗೆ ತೆರಳಲಿದ್ದಾರೆ, ಗೋಕಾಕಿನ ಶೂನ್ಯ ಸಂಪಾದನ ಮಠ ಪ್ರತಿ ವರ್ಷ ಶರಣ ಸಂಸ್ಕೃತಿ ಉತ್ಸವ ನಡೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಗಣ್ಯರಿಗೆ ಕಾಯಕ ಶ್ರೀ ಪ್ರಶಸ್ತಿ ನೀಡುತ್ತ ಬಂದಿದ್ದು ಈ ವರ್ಷದ ಕಾಯಕ ಶ್ರೀ ಐಪಿಎಸ್ ಮಹಿಳಾ ಅಧಿಕಾರಿಯಾಗಿ ರಾಷ್ಡ್ರದ ಗಮನ ಸೆಳೆದಿದ್ದ ಕಿರಣ ಬೇಡಿ ಅವರಿಗೆ ನಾಳೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಇಂದು ಸಂಜೆ 6-00 ಗಂಟೆಗೆ ಉತ್ಸವದ ಉದ್ಘಾಟನೆ ನಡೆಯಲಿದ್ದು ಸಿಎಂ ಇಬ್ರಾಹೀಂ, ರಮೇಶ್ ಜಾರಕಿಹೊಳಿ ,ಮತ್ತು ಅನೇಕ ಜನ ಗಣ್ಯರು ಭಾಗವಹಿದಲಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ