ಬೆಳಗಾವಿಯಲ್ಲಿ ಗಲ್ಲಿ ಗೂಂಡಾಗಳ ಹಾವಳಿ ಹೆಚ್ಚಾಗಿದೆ.ರಿಯಲ್ಲ ಇಸ್ಟೇಟ್ ದಂಧೆಯಲ್ಲಿ ಹೆದರಿಸಿ,ಬೆದರಿಸಿ,ಸುಳ್ಳು ದಾಖಲೆ ಸೃಷ್ಢಿಸಿ ಹಣ ವಸೂಲಿ ಮಾಡುವ ಮರಿ ಪುಡಾರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು.ಇದಕ್ಕೆ ಕಡಿವಾಣ ಹಾಕಲು ಬೆಳಗಾವಿ ಪೋಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.ಇವತ್ತು ಬೆಳಗಿನ ಜಾವ ರೌಡಿಗಳ ಮನೆ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ: ನಗರದಲ್ಲಿ ರೌಡಿಸಂ ಮಾಡುತ್ತ ಜನರನ್ನು ಹೆದರಿಸುತ್ತಿದ್ದ ಒಟ್ಟು 26 ರೌಡಿಗಳ ಮನೆಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಮಾರಕಾಸ್ತ್ರ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಬೆಳಗಾವಿ ನಗರದ ವಿವಿಧ ಕಡೆಗೆ ಬಾಲ ಬಿಚ್ಚಿ ಓಡಾಡುತ್ತಿದ್ದ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರಿಗೆ, ಮೂವರು ರೌಡಿಗಳ ಮನೆಗಳಲ್ಲಿ ತಲವಾರ, ಚಾಕು, ಜಂಬೆ ಸೇರಿದಂತೆ ಇತರೆ ಮಾರಕಾಸ್ತ್ರಗಳು ವಸ್ತುಗಳು ಸಿಕ್ಕಿವೆ.
ರುಕ್ಮೀಣಿ ನಗರದ ಶ್ರೀಧರ ಸತ್ಯಪ್ಪ ತಲವಾರ(29), ಮಹಾಧಚಾರ ರೋಡ್ ನ ವಿನಯ ಶಂಕರ ಪ್ರಧಾನ(45) ಹಾಗೂ ಖಂಜರ ಗಲ್ಲಿಯ ಅಲ್ತಾಫ ಸುಬೇದಾರ((36) ಸೇರಿದಂತೆ 26 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದಲ್ಲಿ ಬಾಲ ಬಿಚ್ಚಿ ಜನರನ್ನು ಹೆದರಿಸಿ ಹಲ್ಲೆ ಮಾಡಿ ರೌಡಿಸಂ ಮಾಡಿ ಗ್ಯಾಂಗ್ ಸ್ಟಾರ್ ಗಳಾಗಿದ್ದ ರೌಡಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಪೊಲೀಸರು ಬಿಸಿಮುಟ್ಟಿಸಿದ್ದಾರೆ. 150ಕ್ಕೂ ಹೆಚ್ಚು ಜನರಿದ್ದ ಪೊಲೀಸರು ಬೆಳ್ಳಂಬೆಳಗ್ಗೆ 5 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಇಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ದಾಳಿ ನಡೆಸಲಾಗಿದೆ. ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡುವವರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದರು.