ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ,ಜಿಲ್ಲಾಧಿಕಾರಿಗಳ ಎಚ್ಚರಿಕೆ
ಬೆಳಗಾವಿ- ಬೆಳಗಾವಿ ನಗರ ಹಾಗು ಜೆಲ್ಲೆಯ ವಿವಿಧ ಗ್ರಾಮಗಳಲ್ಲಿ ಕೆಲವರು ರಸ್ತೆಯನ್ನು ಅಗೆದು,ರಸ್ತೆಗೆ ಬೇಲಿ ಹಾಕಿ ರಸ್ತೆಗಳನ್ನು ಬಂದ್ ಮಾಡುತ್ತಿರುವದರಿಂದ ಪಡಿತರ ಧಾನ್ಯಗಳ ಸಾಗಾಣಿಕೆಗೆ ತೊಂದರೆಯಾಗುತ್ತಿದ್ದು ಈ ರೀತಿ ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಗತ್ಯ ವಸ್ತುಗಳ ಪೂರೈಕೆ,ಮತ್ತು ಪಡಿತರ ಧಾನ್ಯಗಳ ಪೂರೈಕೆಗೆ ತೊಂದರೆ ಮಾಡುವದು ಅಪರಾಧವಾಗಿದ್ದು ಕೂಡಲೇ ರಸ್ತೆಗಳಿಗೆ ಹಾಕಿರುವ ಬೇಲಿಯನ್ನು,ತೆರವು ಮಾಡಿ ಅಗೆದಿರುವ ರಸ್ತೆಗಳನ್ನು ಮುಚ್ವಿ ಪಡಿತರ ಧಾನ್ಯಗಳ ಪೂರೈಕೆಗೆ ಅನಕೂಲ ಮಾಡಿಕೊಡುವಂತೆ ಡಿಸಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ