ಬೆಳಗಾವಿ- ಬೆಳಗಾವಿ ರಾಜಕರಣದ ವೈಶಿಷ್ಟ್ಯವೇ ಬೇರೆ,ಇಲ್ಲಿಯ ರಾಜಕಾರಣವನ್ನು ಯಾರಿಂದಲೂ ಅಳೆದು, ತೂಗಲು ಸಾಧ್ಯವೇ ಇಲ್ಲ.ಯಾಕಂದ್ರೆ ಇಲ್ಲಿ ನಡೆಯುವ ಪಾಲಿಟೀಕ್ಸ್ ಯಾರ ತಲೆಗೂ ಹತ್ತುವದಿಲ್ಲ.ಇದರ ಮರ್ಮ ಯಾರಿಗೂ ತಿಳಿಯುವದಿಲ್ಲ.
ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿ ಇದ್ದಾಗ ಯಾರೂ ಉಹೆ ಮಾಡಲಾಗದ ರಾಜಕೀಯ ಬೆಳವಣಿಗೆಗಳು ನಡೆದು ಹೋದವು ಕುಮಾರಸ್ವಾಮಿ ವಿದೇಶದಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ರಾಜಕೀಯ ಆಟ ಮುಗಿದು ಹೋಗಿತ್ತು.ತೋಳ ಬಂತಲೇ ತೋಳ ಎನ್ನುವ ಅಪಹಾಸ್ಯಕ್ಕೆ ಗುರಿಯಾಗಿದ್ದ ಈ ಆಟದಲ್ಲಿ ಕೊನೆಗೂ ತೋಳ ಬಂದಿತ್ತು.ಸಮ್ಮಿಶ್ರ ಸರ್ಕಾರವನ್ನು ನುಂಗಿದ್ದು ಇತಿಹಾಸ…
ಸಮ್ಮಿಶ್ರ ಸರ್ಕಾರ ಪತನವಾಗಿದ್ದ ಸಂಧರ್ಭದಲ್ಲಿ ನಡೆದ ಆಟ, ಈಗ ಮತ್ತೆ ನಡೆಯುತ್ತಿದೆ.ಬೆಳಗಾವಿ ಜಿಲ್ಲೆಯಿಂದಲೇ ಆಟ ಶುರುವಾಗಿ ಬೆಂಗಳೂರಲ್ಲಿ ಸ್ಪೋಟಗೊಳ್ಳುವ ಹಂತದಲ್ಲಿದ್ದು ಕಾಂಗ್ರೆಸ್ಸಿಗೆ ಇದು ದೊಡ್ಡ ಪಾಠವಾಗಲಿದೆ.
ಹಾಗಾದ್ರೆ ಆಟ ಶುರುವಾಗಲು ಕಾರಣ ಯಾರು ? ಇದಕ್ಕೆ ಬಲಿಪಶು ಆಗಿದ್ದು ಯಾರು ? ಸತೀಶ್ ಜಾರಕಿಹೊಳಿ ಅವರ ಆಕ್ರೋಶಕ್ಕೆ ಕಾರಣ ಏನು ? ಡಿ.ಕೆ ಶಿವಕುಮಾರ್ ಸತೀಶ್ ಮನೆಗೆ ಹೋಗಿದ್ದು ಯಾತಕ್ಕೆ ? ಸತೀಶ್ ಅವರು ಹೊರಡಿಸಿದ್ದ ಮೈಸೂರು ಬಸ್, ಭುಸ್ ಅಂದಿದ್ದು ಯಾತಕ್ಕೆ ? ಸತೀಶ್ ಜಾರಕಿಹೊಳಿ ಅವರು ಆಡುತ್ತಿರುವ ಆಟವಾದ್ರೂ ಏನು ? ಸಮ್ಮಿಶ್ರ ಸರ್ಕಾರ ಪತನ ಆಗಬಹುದೇ.? ಹಾಗಾದ್ರೆ ಬಂಡಾಯದ ನೇತ್ರತ್ವ ವಹಿಸುವರು ಯಾರು ? ಕಾಂಗ್ರೆಸ್ಸಿನಿಂದ 50 ಕ್ಕೂ ಹೆಚ್ಚು ಶಾಸಕರು ಬಂಡಾಯದ ಬಾವುಟ ಹಾರಿಸಲು ಸಾಧ್ಯವೇ…? ಇದು ಸಾಧ್ಯವಾದಲ್ಲಿ ಇವರ ಲೀಡರ್ ಯಾರಾಗ್ತಾರೆ ? ಸಿದ್ರಾಮಯ್ಯ ಕೇವಲ ಒಂದು ವರ್ಷದ ಅವಧಿಗೆ ಸಿಎಂ ಆಗಿದ್ರಾ..? ಡಿ.ಕೆ ಶಿವಕುಮಾರ್ ಸಿಎಂ ಆಗುವ ಸಮಯ ಬಂದಾಗ, ಡಿ.ಕೆ ಶಿವಕುಮಾರ್ ಅವರಿಗೆ ಪಾಠ ಕಲಿಸಲು ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆಯಾ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಯಾವ ಕಾಂಗ್ರೆಸ್ ನಾಯಕನೂ ತಯಾರಿಲ್ಲ.ಯಾಕಂದ್ರೆ ಈ ಎಲ್ಲ ಪ್ರಶ್ನೆಗಳಿಗೆ ಯಾರ ಹತ್ತಿರವೂ ಉತ್ತರವಿಲ್ಲ.ಆದ್ರೆ ಈ ಎಲ್ಲ ಪ್ರಶ್ನೆಗಳು ರಾಜ್ಯದಲ್ಲಿ ಹರದಾಡುತ್ತಿವೆ.
ಈ ಹಿಂದೆ ಸಮ್ಮಿಶ್ರ ಸರ್ಕಾರ ಪತನವಾಗಿದ್ದ ಸಂಧರ್ಭದಲ್ಲಿ ಸರ್ಕಾರ ಪತನವಾಗಲು ಕಾರಣ ಏನು ? ಕಾರಣ ಯಾರು ? ಎನ್ನುವ ಉತ್ತರ ಹುಡುಕಿದ್ದರೆ ಈಗ ಮೇಲ್ಕಾಣಿಸಿದ ಪ್ರಶ್ನೆಗಳು ಉದ್ಭವಿಸುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಪಡಸಾಲೆಯಲ್ಲಿ ಏನೋ ನಡೆಯುತ್ತಿದೆ. ಆದ್ರೆ ಹೇಗೆ ನಡೆಯುತ್ತಿದೆ.ಎಲ್ಲಿ ನಡೆಯುತ್ತಿದೆ.? ಯಾವಾಗ ಸ್ಪೋಟ ಆಗುತ್ತದೆ ಅನ್ನೋದು ಯಾರಿಗೂ ಅರ್ಥವಾಗುತ್ತಿಲ್ಲ. ಯಾಕಂದ್ರೆ ಇದು ತ್ರೀ ಮೂರ್ತಿಗಳ ನಡುವೆ ನಡೆಯುತ್ತಿರುವ ತ್ರಿಕೋನ ವಾರ್ ಇದಾಗಿದೆ. ಈ ವಾರ್ ಈಗ ಕ್ಲೈಮಾಕ್ಸ್ ಹಂತ ತಲುಪಿದ್ದು ಸತ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಆಟ ಕಾಂಗ್ರೆಸ್ಸಿಗೆ ದೊಡ್ಡ ಪಾಠ ಕಲಿಸುವದರಲ್ಲಿ ಯಾವುದೇ ಅನುಮಾನ ಇಲ್ಲ.