ಬೆಳಗಾವಿ- ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ,ಮಳೆಯ ಅವಾಂತರಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಬಲಿಯಾಗಿದೆ.
ನಿರಂತರ ಮಳೆಯ ಪರಿಣಾಮ ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಸಾವನ್ನೊಪ್ಪಿದ ಘಟನೆ
ಬೆಳಗಾವಿಯ ಗೋಕಾಕ್ ನಗರದ ಮಹಾಲಿಂಗೇಶ್ವರ ನಗರದಲ್ಲಿ ನಡೆದಿದೆ.
ಕೀರ್ತಿಕಾ ನಾಗೇಶ ಪೂಜಾರಿ(3) ಗೋಡೆ ಕುಸಿದು ಸಾವನ್ನೊಪ್ಪಿದ್ದಾಳೆ.ಘಟನೆಯಲ್ಲಿ ಕೀರ್ತಿಕಾ ತಾಯಿ ರೇಷ್ಮಾ, ಸಹೋದರಿ ಖುಷಿಗೂ ಗಂಭೀರ ಗಾಯಗಳಾಗಿವೆ.ಮನೆಯಲ್ಲಿ ಮಲಗಿದ್ದಾಗ ಪಕ್ಕದ ಮನೆಯ ಗೋಡೆ ನಾಗೇಶ ಪೂಜಾರಿ ಮನೆ ಮೇಲೆ ಬಿದ್ದು ಅವಘಡ ಸಂಭವಿಸಿದೆ.
ಗಾಯಾಳುಗಳನ್ನು ಗೋಕಾಕ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಸ್ಥಳಕ್ಕೆ ನಗರಸಭೆ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಭೇಟಿ, ಪರಿಶೀಲನೆ ನಡಸಿದ್ದಾರೆ.
ಗೋಕಾಕ ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ