Breaking News

ತರಾತುರಿಯ ಜಾತಿ ಸಮೀಕ್ಷೆ ಬೇಡ: ಮುರಘೇಂದ್ರಗೌಡ ಪಾಟೀಲ

ಬೆಳಗಾವಿ:ರಾಜ್ಯ ಸರ್ಕಾರ ಜಾತಿ ಸಮೀಕ್ಷೆಗೆ ಪ್ರಾರಂಭ ಮಾಡಲು ಸೆ22 ರಂದು ನಿಗದಿಗೊಳಿಸಿರುವದನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ತುರಾತುರಿಯಲ್ಲಿ ನಿರ್ಧಾರ ಕೈಗೊಳ್ಳದೆ ಇನ್ನಷ್ಟು ಜನರಲ್ಲಿ ಜಾಗೃತಿ ಮೂಡಿಸಿ ಗಣತಿ ಪ್ರಾರಂಭಿಸಬೇಕೆಂದು ನ್ಯಾಯವಾದಿ ಬಿಜೆಪಿ ಮುಖಂಡ ಮುರಘೇಂದ್ರ ಪಾಟೀಲ ತಿಳಿಸಿದ್ದಾರೆ.

ಮಾಧ್ಯಮದ ಜೋತೆ ಮಾತನಾಡಿದ ಅವರು, ವಾರದಲ್ಲಿ ದಸರಾ ಪ್ರಾರಂಭವಾಗುತ್ತದೆ. ಹಳ್ಳಿಗಳಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ಕೊಯ್ಲು, ಹಿಂಗಾರಿಗೆ ಭೂಮಿ ಹದ ಗೊಳಿಸುವ ಕಾರ್ಯದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿರುವಾಗ ಸರ್ಕಾರ ಕೆಲವೆ ದಿನಗಳಲ್ಲಿ ಸಮೀಕ್ಷೆ‌ ಮೂಗಿಸುತ್ತೆವೆ ಎನ್ನುವದು ಸರಿಯಲ್ಲ; ಯಾವುದೋ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಯಾವ ಪುರುಷಾರ್ಥಕ್ಕೆ. ರಾಜ್ಯದ ಸುಮಾರು 2 ಕೋಟಿ ಮನೆಗಳ ಸಮೀಕ್ಷೆ ಸುಲಭಸಾಧ್ಯವಲ್ಲ; ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡುವದು ಉತ್ತಮ.
ಸರ್ಕಾರ ಹೊರಡಿಸಿರುವ ಹೊಸ ಜಾತಿಗಳ ಸೃಷ್ಟಿಮಾಡಿರುವದು ದುರದೃಷ್ಟಕರ. 1,400 ಜಾತಿಗಳ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಿಸಿ ಅದರ ಸಂಬಂಧ ಆಕ್ಷೇಪಣೆಗಳನ್ನು ಕೇಳಿದ್ದರು. ನಂತರ ಅದರಲ್ಲಿರುವ ಕೆಲ ಅನವಾಶ್ಯಕವಾಗಿ ಸೃಷ್ಟಿಸಿದ್ದ ಜಾತಿಗಳು ಕೈಬಿಡಬೇಕಾಗಿತ್ತು ಮೊತ್ತೊಂದಷ್ಟು ಬಿಟ್ಟು ಹೋಗಿರುವ ಮತ್ತು ಅನಾವಶ್ಯಕ ಜಾತಿಗಳನ್ನು ಸೇರಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿತ್ತಿರುವ ಸರ್ಕಾರದ ನೀತಿ ಸರಿಯಲ್ಲ. ಸರಕಾರದ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ. ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್- ಈ ರೀತಿ 107 ಕಡೆಗಳಲ್ಲಿ ಹೊಸ ಜಾತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಿಗೆ ಕೋಡ್ ನಂಬರ್ ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಮರುಗೇಂದ್ರಗೌಡ ಆಕ್ಷೇಪಿಸಿದರು.

ಇಡೀ ರಾಜ್ಯದಲ್ಲಿ ಇದೊಂದು ಜನಾಂದೋಲನ ಆಗುವ ಸಾಧ್ಯತೆಗಳಿವೆ; ಕ್ರಿಶ್ಚಿಯನ್, ಎಂದಾಗ 2-3 ಉಪ ಜಾತಿ ಕೇಳಿದ್ದೆವು. ಮುಸ್ಲಿಮರಲ್ಲಿ ಕೆಲವು ಉಪ ಜಾತಿ ಕೇಳಿದ್ದೆವು. ಎಲ್ಲ ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್, ಮುಸ್ಲಿಂ ಎಂದು ಹಾಕಿ ಮತ್ತೊಂದು ರೀತಿ ಮತಾಂತರಕ್ಕೆ ಪ್ರೇರಣೆ ಕೊಡುವ ಹುನ್ನಾರವನ್ನು ಸರಕಾರ ಮಾಡಿದೆ ಎಂದು ಟೀಕಿಸಿದರು. ಇದು ಮತ್ತೊಂದು ಮೀಸಲಾತಿಯ ಹುನ್ನಾರ ಎಂದು ಜನರಲ್ಲಿ ಅನುಮಾನ ಹುಟ್ಟು ಹಾಕುತ್ತಿದೆ. ಹೊಸದಾಗಿ ಸೃಷ್ಟಿಸಿದ ಜಾತಿಗಳನ್ನು ಪಟ್ಟಿಯಿಂದ ಕೈಬಿಡಲು ಆಗ್ರಹಿಸಿದ್ದಾರೆ.
ಸಮೀಕ್ಷೆಗೆ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಕೊಡಬೇಕು. ಕನ್ನಡದ ವ್ಯಾಕರಣ ಮಾಲೆ ಪ್ರಕಾರ 1,400 ಜಾತಿ ಪಟ್ಟಿ ಮಾಡದೆ ಪ್ರವರ್ಗ ಪ್ರಕಾರ ಮಾಡಬೇಕು. 15 ದಿನದಲ್ಲೇ ಸಮಿಕ್ಷೆ ಮಾಡುವ ಹಠಮಾರಿತನ, ತರಾತುರಿಯಲ್ಲಿ ಮಾಡುವ ಸಮೀಕ್ಷಾ ವರದಿ ಮತ್ತೊಮ್ಮೆ ತಿರಸ್ಕಾರ ಆಗುವಂತಾಗಬಾರದು.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಕರ್ನಾಟಕದಲ್ಲಿ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಮಾಡಲು ತಯಾರಿ ಮಾಡಿಕೊಂಡಿದೆ. ಈ ಹಿಂದೆ ಮಾನ್ಯ ಕಾಂತರಾಜು ಅವರ ನೇತೃತ್ವದಲ್ಲಿ ಆಯೋಗವು 165 ಕೋಟಿ ವೆಚ್ಚದಲ್ಲಿ ವರದಿ ಸಿದ್ಧಪಡಿಸಿತ್ತು. ಆ ವರದಿಯನ್ನು ಸರಕಾರಕ್ಕೆ ಮಂಡಿಸಲಿಲ್ಲ; 165 ಕೋಟಿ ನಿರುಪಯುಕ್ತವಾಗಿತ್ತು.
ಬಳಿಕ 110 ಕೋಟಿ ವೆಚ್ಚದಲ್ಲಿ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್‍ದಾಸ್ ಅವರ ಸಮೀಕ್ಷೆಯೂ ನಡೆಯಿತು. ಆ ಸಮೀಕ್ಷೆಯ ಯಾವ ಅಂಶಗಳನ್ನೂ ಪರಿಗಣಿಸದೇ ಸರಕಾರವು ಯಾವ ರೀತಿ ನಿಲುವು ಪ್ರಕಟಿಸಿತು ಎಂಬುದು ಕರ್ನಾಟಕದಲ್ಲಿ ಚರ್ಚೆಯ ವಿಷಯವಾಗಿದೆ. ಈ ಸಮೀಕ್ಷೆಯಾದರು ಸರಿಯಾಗಬೇಕಾದರೆ ತುರಾತುರಿಯಲ್ಲಿ ಮಾಡದೆ ಸ್ವಿಕೃತವಾಗುವ ನಿಟ್ಟಿನಲ್ಲಿ ಸಾಗಬೇಕು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

 

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *