ಬೆ
ಳಗಾವಿ- ಬೆಳಗಾವಿಯಲ್ಲಿ ಕೊರೋನಾ ಸೊಂಕು ಪತ್ತೆ ಮಾಡುವ ಲ್ಯಾಬ್ ಆರಂಭಿಸಲು ICMR ಹಸಿರು ನಿಶಾನೆ ನೀಡಿದೆ ಎಂದು ರಾಷ್ಟ್ರದ ಪ್ರತಿಷ್ಠಿತ ಹಿಂದೂ ಇಂಗ್ಲೀಷ್ ಪತ್ರಿಕೆ ಟ್ವಿಟ್ ಮಾಡಿದೆ
ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯ ಎದುರಿನ. ರಾಷ್ಟ್ರೀಯ ಪಾರಂಪರಿಕ ಔಷಧಿ ಸಂಶೋಧನಾ ಕೇಂದ್ರದ ಕಟ್ಟಡದಲ್ಲಿ ಈ ಪ್ರಯೋಗಾಲಯ ಆರಂಭವಾಗಲಿದೆ .
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರುಡುತ್ತಿದ್ದು ಕೊರೋನಾ ಸೊಂಕಿತರ ಗಂಟಲು ದ್ರವ ಪರೀಕ್ಷೆ ಇನ್ನು ಮುಂದೆ ತ್ವರಿತವಾಗಿ ನಡೆಯಲಿದೆ
ಇದಕ್ಕು ಮೊದಲು ಬೆಳಗಾವಿ ಜಿಲ್ಲೆಯ ಶಂಕಿತರ ಗಂಟಲು ದ್ರವಗಳನ್ನು ಶಿವಮೊಗ್ಗ ಮತ್ತು,ಬೆಂಗಳೂರಿಗೆ ಕಳಿಸುವ ಪರಿಸ್ಥಿತಿ ಇತ್ತು ಇನ್ನು ಮುಂದೆ ಬೆಳಗಾವಿಯಲ್ಲೇ ಪ್ರಯೋಗಾಲಯ ಆರಂಭವಾಗುತ್ತಿರುವದರಿಂದ ಸೊಂಕು ಪತ್ತೆ ವೇಗದಲ್ಲಿ ನಡೆಯಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ