ಬೆಳಗಾವಿ – ಇಂದು ಗುರುವಾರ ,ಗುರುರಾಯರ ದಿನ ,ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಗುರುರಾಯರ ಕೃಪೆಯಿಂದ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಬಂದಿಲ್ಲ.ಹೀಗಾಗಿ ಗುರುವಾರ ಬೆಳಗಾವಿ ಪಾಲಿಗೆ ಶುಭ ದಿನ
ಇಂದಿನ ರಾಜ್ಯಮಟ್ಟದ ಹೆಲ್ತ ಬುಲಿಟೀನ್ ನಲ್ಲಿ ಬೆಂಗಳೂರು ಸೇರಿದಂತೆ ಬೇರೆ, ಬೇರೆ, ಜಿಲ್ಲೆಗಳ 16 ಹೊಸ ಪಾಸಿಟೀವ್ ಪ್ರಕರಣಗಳು ಬೆಳಕಿಗೆ ಬಂದಿವೆ.ಆದರೆ ಬೆಳಗಾವಿ ಜಿಲ್ಲೆಯಲ್ಲಿ ಹೊಸ ಪಾಸಿಟೀವ್ ಪ್ರಕರಣಗಳು ಪತ್ತೆಯಾಗದೇ ಇರುವದು ಬೆಳಗಾವಿ ಜಿಲ್ಲೆಗೆ ಸಂತಸದ ಸುದ್ಧಿ.
ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅನಕೂಲ ಆಗುವಂತೆ ಇಂದು ಬೆಳಿಗ್ಗೆ ಕೆಲ ಘಂಟೆಗಳ ಕಾಲ ,ಲಾಕ್ ಡೌನ್ ಸಡಲಿಕೆ ಮಾಡಿದಂತೆ ಕಂಡು ದಿತು ,ಬೆಳಗಿನ ಜಾವ ನಗರದಲ್ಲಿ ವಾಹನಗಳ ಓಡಾಟ ಕಂಡುಬಂದಿತು ,
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್…ಈಗ ಮೈನಸ್ ಆಗುವ ಹಾದಿ ಹಿಡಿದಿದೆ .ಸೊಂಕಿತರ ಸಂಖ್ಯೆ ಈ ವಾರದಲ್ಲಿ ಏರಿಕೆ ಆಗಿಲ್ಲ.ಸೊಂಕಿತರ ಸಂಪರ್ಕಕ್ಕೆ ಬಂದವರು ಈಗಾಗಲೇ ಕ್ವಾರಂಟೈನ್ ನಲ್ಲಿ ಇರುವದರಿಂದ ಜಿಲ್ಲೆಯ ಜನ ಆತಂಕ ಪಡಬೇಕಾಗಿಲ್ಲ.
ಇಂದಿನಿಂದ ಬೆಳಗಾವಿಯ ಪ್ರಯೋಗಾಲಯ ಆರಂಭವಾಗಿದೆ. ಕ್ವಾರಂಟೈನ್ ನಲ್ಲಿ ಇರುವ ನೂರಾರು ಜನರ ಗಂಟಲು ದ್ರವ ಎರಡನೇಯ ಬಾರಿ ಚೆಕಪ್ ಆಗಿ ತ್ವರಿತಗತಿಯಲ್ಲಿ ರಿಪೋರ್ಟ್ ಗಳು ವೈದ್ಯರ ಕೈ ಸೇರಲಿವೆ .ಹೀಗಾಗಿ ಕ್ವಾರಂಟೈನ್ ನಲ್ಲಿ ಇರುವ ಶಂಕಿತರು ಡಿಸ್ಚಾರ್ಜ ಆಗುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.