ಬೆಳಗಾವಿ- ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಬಳಿ ಕಾರು ಪಾರ್ಕ ಮಾಡಿ ತರಕಾರಿ ಖರೀಧಿ ಮಾಡಲು ಹೋದ ಸಂಧರ್ಭದಲ್ಲಿ ಖದೀಮರು ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ ಬ್ಯಾಗ್ ದೋಚಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ
ಗೋವಾ ಮೂಲದ ಕುಟುಂಬವೊಂದು ಅಥಣಿ ತಾಲ್ಲೂಕಿನ ಐನಾಪೂರ ಗ್ರಾಮಕ್ಕೆ ಹೋಗಿ ಮರಳಿ ಗೋವಾಗೆ ತೆರಳುವಾಗ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಬಳಿ ಕಾರ್ ಪಾರ್ಕ ಮಾಡಿ ತರಕಾರಿ ಖರೀಧಿಸಲು ಪೇಟೆಗೆ ಹೋಗಿದ್ದಾರೆ ಇತ್ತ ಕಾರಿನ ಗ್ಲಾಸ್ ಒಡೆದ ಖದೀಮರು ಕಾರಿನಲ್ಲಿದ್ದ ಬ್ಯಾಗ್ ದೋಚಿದ್ದಾರೆ
ಬ್ಯಾಗ್ ನಲ್ಲಿ 40 ಗ್ರಾಂ ತೂಕದ ಆಭರಣಗಳು ಮತ್ತು ಎರಡು ಸಾವಿರ ನಗದು ಹಣವನ್ನು ದೋಚಲಾಗಿದೆ
ಗೋವಾ ಮೂಲದ ಪುಂಡಲೀಕ ಜೀವರೆ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ
ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಕಾರಿನ ಗ್ಲಾಸ್ ಒಡೆದು ಹಣ ದೋಚುವ ಗ್ಯಾಂಗ್ ಹುಟ್ಟಿಕೊಂಡಿದೆ ಈ ಗ್ಯಾಂಗ್ ಅಜ್ಞಾತ ಸ್ಥಳಗಳ್ಲಿ ಪಾರ್ಕ್ ಮಾಡಿರುವ ವಾಹನಗಳನ್ನು ಟಾರ್ಗೇಟ್ ಮಾಡುತ್ತಿದೆ ಈ ಬಗ್ಗೆ ಪೋಲೀಸರು ಶಿಸ್ತಿನ ಕ್ರಮ ಜರುಗಿಸುವದು ಅಗತ್ಯ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ