ಬೆಳಗಾವಿ- ಜಂಬೂ ಸವಾರಿಗೆ ಅಷ್ಟೊಂದು ತಯಾರಿ ನಡೆದಿತ್ತೋ ಇಲ್ಲೋ ಗೊತ್ತಿಲ್ಲ ಆದ್ರೆ ಬೆಳಗಾವಿಯಲ್ಲಿ ಎಣ್ಣೆ ಅಂಗಡಿ ಶುರು ಮಾಡಲು ಭರ್ಜರಿ ತಯಾರಿ ನಡದೈತ್ರೀ….
ಬೆಳಗಾವಿ ಜಿಲ್ಲೆಯಲ್ಲಿ ನಾಳೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ ಹೀಗಾಗಿ ಬೆಳಗಾವಿ ನಗರದಲ್ಲಿ ವೈನ್ ಶಾಪ್ ಹಾಗು MSIL ಅಂಗಡಿಗಳನ್ನು ಶುರು ಮಾಡಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.
ಮದ್ಯ ಮಾರಾಟಗಾರರು, ಗ್ರಾಹಕರು ಪಾಲಿಸಬೇಕಾದ ನಿಯಮಗಳು ಇಂತಿವೆ
ಎಂಎಸ್‌ಐಎಲ್, ಸಿಎಲ್2, ಸಿಎಲ್ 11 ಸಿ ಸನ್ನದು ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ
ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ
ಮದ್ಯ ಮಾರಾಟ ಮಳಿಗೆಗಳ ನೌಕರರು ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸುವುದು ಕಡ್ಡಾಯ
ಮಳಿಗೆಗಳ ನೌಕರರು ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸದಿದ್ದರೆ 1000 ರೂ. ದಂಡ
ಮದ್ಯ ಮಾರಾಟ ಮಳಿಗೆಗಳ ಮುಂದೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಬೇಕು
ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು
ಗ್ರಾಹಕರಿಗೆ ಪ್ರತ್ಯೇಕ ಆಗಮನ, ನಿರ್ಗಮನ ಪಥದ ವ್ಯವಸ್ಥೆ ಕಲ್ಪಿಸಬೇಕು
ಮಾಸ್ಕ್ ಧರಿಸದೇ ಎಣ್ಣೆ ಖರೀದಿಗೆ ಬಂದ ಗ್ರಾಹಕರಿಗೂ 1000 ರೂ. ದಂಡ
ಈ ಬಗ್ಗೆ ಮಳಿಗೆ ಎದುರು ಸೂಚನಾ ಫಲಕ ಅಳವಡಿಸೋದು ಕಡ್ಡಾಯ
ಮದ್ಯ ಮಾರಾಟ ಮಳಿಗೆಗಳ ಎದುರು ಸೋಷಿಯಲ್ ಡಿಸ್ಟನ್ಸ್ ಮಾರ್ಕ್ ಹಾಕಬೇಕು
ಆರು ಅಡಿ ಅಂತರದಲ್ಲಿ ಗ್ರಾಹಕರನ್ನು ನಿಲ್ಲಿಸುವ ವ್ಯವಸ್ಥೆ ಮಾಡಬೇಕು
ಮದ್ಯ ಮಾರಾಟ ಮಳಿಗೆಯಲ್ಲಿ ಏಕಕಾಲಕ್ಕೆ ಐದಕ್ಕೂ ಹೆಚ್ಚು ಗ್ರಾಹಕರು ಬರುವಂತಿಲ್ಲ
ಮಳಿಗೆಗಳಲ್ಲಿ ಸಿಸಿ ಟಿವಿ ಕಾರ್ಯನಿರ್ವಹಿಸುವುದನ್ನು ಪರಿಶೀಲಿಸಬೇಕು
ಅಬಕಾರಿ ಅಧಿಕಾರಿಗಳು ಕೇಳಿದಾಗ ಸಿಸಿ ಕ್ಯಾಮರಾ ವಿಸ್ಯೂಯಲ್ಸ್ ನೀಡಬೇಕು
ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ
ಸ್ಟ್ಯಾಂಡ್ ಅಲೋನ್, ಸಿಎಲ್ 2, ಸಿಎಲ್ 11 ಸಿ ಲೈಸೆನ್ಸ್ ಇರೋ ಮಳಿಗೆಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ
ನಿಯಮ ಉಲ್ಲಂಘಿಸಿದ್ರೆ ಅಬಕಾರಿ ಕಾಯ್ದೆ 1965ರ ಕಲಂ 29ರಂತೆ ಕಠಿಣ ಕ್ರಮದ ಎಚ್ಚರಿಕೆ