ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಎಣ್ಣೆ ಅಂಗಡಿಗಳಿಗೆ ಬೆಳಗ್ಗೆ 9 ಗಂಟೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನೆಲೆಯಲ್ಲಿ ,ನಿನ್ನೆ ಮದ್ಯರಾತ್ರಿಯಿಂದಲೇ ಅಂಗಡಿಗಳ ಎದುರು ಸೋಸಿಯಲ್ ಡಿಸ್ಟನ್ಸ್ ಕಾಪಾಡುವ ಮಾರ್ಕಿಂಗ್ ಗಳಲ್ಲಿ ಕೈ ಚೀಲಗಳು ಕ್ಯು ನಿಂತಿವೆ.
ಬೆಳಗಾವಿ ನಗರದ ವೈನ್‌ಶಾಪ್ ಗಳ ಎದುರು ಚೀಲಗಳದ್ದೇ ಕ್ಯೂ.ಪ್ರತಿಯೊಂದು ಮಾರ್ಕಿಂಗ್ ನಲ್ಲಿ ಕೈಚೀಲಗಳು ಕಾಣಿಸುತ್ತಿವೆ.
ಸೋಷಿಯಲ್ ಡಿಸ್ಟನ್ಸ್ ಮಾರ್ಕಿಂಗ್‌ನಲ್ಲಿ ಚೀಲಗಳನ್ನಿಟ್ಟು ದೂರ ನಿಂತ ಮದ್ಯಪ್ರಿಯರು ಬಾಗಿಲು ತೆರೆದ ತಕ್ಷಣ ಕೈ ಚೀಲಗಳಿಗೆ ಖೋ ಕೊಟ್ಟು ಮದ್ಯ ಖರೀಧಿಸಲು ಸರದಿಯಲ್ಲಿ ನಿಲ್ಲುತ್ತಿರುವ ದೃಶ್ಯ, ಎಲ್ಲ ಎಣ್ಣೆ ಅಂಗಡಿಗಳ ಎದುರು ಕಾಣಬಹುದಾಗಿದೆ.
ಬೆಳಗಾವಿ ನಗರದ ಆರ್‌ಪಿಡಿ ವೃತ್ತದ ಲಿಕರ್ ಟೌನ್ ಮಳಿಗೆ ಎದುರು ಕಂಡು ಬಂದ ದೃಶ್ಯವಿದು ಮತ್ತೊಂದೆಡೆ ಎಣ್ಣೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿರುವ ಎಣ್ಣೆ ಪ್ರೀಯರು ನಲವತ್ತು ದಿನಗಳ ನಂತರ ತಮ್ಮ ಬ್ರ್ಯಾಂಡ್ ಖರಿಧಿಸುವ ಆತುತದಲ್ಲಿದ್ದಾರೆ
ಕ್ಯಾಮರಾ ಪರ್ಸನ್
ರಾಯಲ್ ಸ್ಟ್ಯಾಗ್ ಜೊತೆ ಬ್ಲ್ಯಾಕ್ ಡಾಗ್
ಬೆಳಗಾವಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ