ಬೆಳಗಾವಿ- ಈಗಲಾಕ್ ಡೌನ್, ಆಸ್ಪತ್ರೆ ನೋಡಿದ್ರೆ ಓಡಿ ಹೋಗುವ ಸಮಯ,ಇಂತಹ ಸಂಕಷ್ಟದ ಸಮಯದಲ್ಲಿ ಮುಸ್ಲಿಂ ಗರ್ಭವತಿಗೆ ಹಿಂದೂ ಯುವಕನೊಬ್ಬ ರಕ್ತದಾನ ಮಾಡಿ ಮಾನವೀಯತೆ ಮೆರೆಯುವ ಜೊತೆಗೆ ಭಾವೈಕ್ಯತೆ ಮೆರೆದ ಘಟನೆ ಕುಂದಾ ನಗರಿ ಬೆಳಗಾವಿಯಲ್ಲಿ ನಡೆದಿದೆ.
ಕೊರೊನಾ ವೈರಸ್ ಆತಂಕ ಈಗ ಎಲ್ಲರಿಗೂ ಕಾಡುತ್ತಿದೆ. ದೇಶಾದ್ಯಂತ ಲಾಕ್‌ಡೌನ್‌ಗೆ ಘೋಷಿಸಲಾಗಿದೆ. ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ತಲ್ಲನಗೊಂಡಿದೆ.ಇಂತಹ ಬೀತಿಯ ವಾತಾವರಣದಲ್ಲಿ ರಕ್ತದಾನ ಮಾಡಲು ಆಸ್ಪತ್ರೆಯತ್ತ ಮುಖಮಾಡಲು ಹಲವರು ಹೆದರುತ್ತಿದ್ದಾರೆ. ಅದರೆ ಇದೆಲ್ಲದರ ಮಧ್ಯೆ, ಸೋಶಿಯಲ್ ಮಿಡಿಯಾದಲ್ಲಿ ಮೆಸ್ಸೇಜ್ ನೋಡಿದ ಹಿಂದೂ ಯುವಕನೊಬ್ಬ ಕೇವಲ ಅರ್ದ ಘಂಟೆಯಲ್ಲೇ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿದ ಪ್ರಶಂಸೆಗೆ ಅರ್ಹವಾದ ಅಪರೂಪದ ಘಟನೆ, ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ
ಬೆಳಗಾವಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಭಾವೈಕ್ಯತೆ ಹಾಗೂ ಮಾನವೀಯತೆಯ ಸಮಾಗಮವಾಗಿದೆ.
ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಆಫ್ರೀನ್ ಶಾಬುದ್ದೀನ್ ಮುಲ್ಲಾ ಎಂಬ ತುಂಬು ಗರ್ಭಿಣಿಗೆ ರಕ್ತದ ಪ್ಲೇಟ್‌ಲೆಟ್ಸ್ ಬೇಕಾಗಿತ್ತು. ಆಸ್ಪತ್ರೆಯವರು ಯಾರದ್ದಾದರೂ ಬ್ಲಡ್ ಪ್ಲೇಟ್‌ಲೆಟ್ಸ್ ನೀಡಿ ಅದನ್ನ ಎಕ್ಸ್‌ಚೇಂಜ್ ಮಾಡಲಾಗುವುದು ಅಂತಾ ತಿಳಿಸಿದ್ದರಂತೆ. ಆದರೆ ಕೊರೊನಾ ಮಹಾಮಾರಿಗೆ ಅಂಜಿ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಆಫ್ರೀನ್‌ಗೆ ಗಂಡ ಶಾಬುದ್ದೀನ್ ರಕ್ತ ನೀಡಬೇಕೆಂದರೆ ಆತ ಪವಿತ್ರ ರಂಜಾನ್ ತಿಂಗಳ ಉಪವಾಸದಲ್ಲಿದ್ದ. ಹೀಗಾಗಿ ಸಹಾಯಕ್ಕಾಗಿ ಸ್ನೇಹಿತರ ಬಳಿ ವಿಚಾರಿಸಿದಾಗ ಮಾಧ್ಯಮದವರ ಮೂಲಕ ಬೆಳಗಾವಿ ಬ್ಲಡ್ ಗ್ರುಪ್ ವಾಟ್ಸಪ್ ಅಡ್ಮೀನ್ ಗಣೇಶ್ ಪಾಟೀಲ್‌ರನ್ನು ಸಂಪರ್ಕಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಮನವಿ ಮಾಡುವ ಮೆಸ್ಸೇಜ್ ಹಾಕಲಾಯಿತು. ವಾಟ್ಸಪ್ ಗ್ರೂಪ್‌ನಲ್ಲಿ ಮೆಸೇಜ್ ನೋಡಿದ ಅರ್ಧಗಂಟೆಯಲ್ಲಿ ಬೆಳಗಾವಿ ಸದಾಶಿವ ನಗರ ನಿವಾಸಿ ಯುವಬ್ರಿಗೇಡ್ ಕಾರ್ಯಕರ್ತ ವಿಜಯ್ ರಾಥೋಡ್ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಆಫ್ರೀನ್‌ಗೆ ಕಳೆದ ರಾತ್ರಿ ಮುದ್ದಾದ ಗಂಡು ಮಗು ಜನಿಸಿದ್ದು ಸಾಕ್ಷಾತ್ ಭಗವಂತನ ರೂಪದಲ್ಲೇ ವಿಜಯ್ ರಾಥೋಡ್ ಆಗಮಿಸಿ ಎರಡು ಜೀವ ಉಳಿಸಿದ್ದು , ಕುಟುಂಬಸ್ಥರು ರಕ್ತದಾನ ಮಾಡಿದ ಹಿಂದೂ ಯುವಕನಿಗೆ ಧನ್ಯವಾದ ತಿಳಿಸಿದ್ದಾರೆ.
ಇದು ಭಾವೈಕ್ಯತೆಯ ಭಾರತ.ವಿವಿಧತೆಯಲ್ಲಿ ಏಕತೆ ಇರೋದು ನಮ್ಮ ದೇಶದಲ್ಲೇ ಮಾನವ ಧರ್ಮವೇ ಇಲ್ಲಿ ಶ್ರೇಷ್ಠ…
ಜೈ ಹಿಂದ್…