ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಕಣ್ಣು ಮುಚ್ಚಾಲೆ ಆಟದೊಂದಿಗೆ ಖೋ..ಖೋ ಆಟವನ್ನೂ ಆಡುತ್ತಿದೆ ದಿನಕಳೆದಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುತ್ತಲೇ ಇದೆ .
ಬೆಳಗಾವಿ ನಗರದ ಪಕ್ಕದಲ್ಲಿರುವ ಯಳ್ಳೂರ ಗ್ರಾಮದ ಕೊರೋನಾ ಸೊಂಕಿತ ಗುಣಮುಖನಾಗಿ ನಿಗದಿತ ಅವಧಿ ಮುಕ್ತಾಯವಾಗಿರುವದರಿಂದ ಈ ಗ್ರಾಮ ಈಗ ಶೀಲ್ ಡೌನ್ ನಿಂದ ಮುಕ್ತಿ ಪಡೆದಿದೆ. ಜಿಲ್ಲಾಧಿಕಾರಿಗಳು ಕಂಟೈನ್ಮೆಂಟ್ ಝೋನ್ ಆಗಿದ್ದ ಯಳ್ಳೂರ ಗ್ರಾಮವನ್ನು ಡಿ ನೋಟಿಫೈ ಮಾಡಿ ಅಂದ್ರೆ ಯಳ್ಳೂರ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ನಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುಂಬೈಯಿಂದ ಬೆಳಗಾವಿಯ ಸದಾಶಿವ ನಗರಕ್ಕೆ ಬಂದಿರುವ ಗರ್ಭಿಣಿಗೆ ಸೊಂಕು ತಗಲಿರುವ ಕಾರಣ ಬೆಳಗಾವಿ ನಗರದ ಹಾಯ್ ಫಾಯ್ ಬಡಾವಣೆ ಎಂದೇ ಕರೆಯಲ್ಪಡುವ ಸದಾಶಿವ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಈ ಪ್ರದೇಶವನ್ನು ಶೀಲ್ ಡೌನ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.