ಬೆಳಗಾವಿ-ಬೆಳಗಾವಿಗೆ ಕಂಟಕವಾಗುತ್ತಾ ಮುಂಬೈನ ಧಾರಾವಿ ಸ್ಲಂ ನಂಟು ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಮುಂಬೈನ ಧಾರಾವಿ ಪ್ರದೇಶದಿಂದ ಬೆಳಗಾವಿಯ ಸದಾಶಿವ ನಗರಕ್ಕೆ ಮರಳಿದ್ದ ಗರ್ಭಿಣಿಗೆ ಕೊರೀನಾ ಸೊಂಕು ಇರುವದು ದೃಡವಾದ ಬಳಿಕ ಪೋಲೀಸರು ಟ್ರಾವಲ್ ಹಿಸ್ಟರಿಯನ್ನು ಕಲೆಹಾಕುತ್ತಿದ್ದಾರೆ.
ಈ ಗರ್ಭಿಣಿಯ ಟ್ರಾವಲ್ ಹಿಸ್ಟರಿ
ಬೆಚ್ಚಿಬೀಳಿಸುತ್ತಿದೆ. ಬೆಳಗಾವಿಯ ಸೋಂಕಿತ ಗರ್ಭಿಣಿ P-974 ಟ್ರಾವೆಲ್ ಹಿಸ್ಟರಿ ಆಧರಿಸಿ ಕ್ವಾರಂಟೈನ್ ಮಾಡುವ ಕಾರ್ಯಾಚರಣೆಯೂ ನಡೆದಿದೆ.
ಗರ್ಭಿಣಿ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 45 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 10 ಜನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 35 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.
*ಮೇ 5ರಂದು ಸೇವಾ ಸಿಂಧು ಇ ಪಾಸ್ ಪಡೆಯದೇ ಬೆಳಗಾವಿಗೆ ಎಂಟ್ರಿ ಕೊಟ್ಟಿದ್ದ ಗರ್ಭಿಣಿ ಮೇ 5 ರಿಂದ ಮೇ 11ರವರೆಗೆ 6 ದಿನಗಳ ಕಾಲ ಬಡಾವಣೆಯ ವಿವಿಧೆಡೆ ಓಡಾಡಿದ್ದ ಮಾಹಿತಿ ಆಧರಿಸಿ ಒಟ್ಟು 45 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಚೆಕ್‌ಅಪ್‌ಗೆಂದು ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಸೋಂಕಿತ ಗರ್ಭಿಣಿ ಮುಂಬೈನಿಂದ ಬಂದಿದ್ದಳೆಂಬ ಪ್ರಾಥಮಿಕ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಅಲ್ಲಿಯ ವೈದ್ಯರು ಕೋವಿಡ್-19 ಟೆಸ್ಟ್ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದಾರೆ.
ಬಳಿಕ ಅಲ್ಲಿಂದ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ತೆರಳಿದ್ದ ಗರ್ಭಿಣಿ, ಬಿಮ್ಸ್ ಆಸ್ಪತ್ರೆಯಲ್ಲಿ ನಾರ್ಮಲ್ ಚೆಕ್‌ಅಪ್ ಮಾಡಿಸಿ ಮನೆಗೆ ತೆರಳಿದ್ದಳು
ಗರ್ಭಿಣಿ ಕುಟುಂಬಸ್ಥರ ಮಾಹಿತಿ ಮೇರೆಗೆ ಸಂಶಯಗೊಂಡು ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಯಿತು.ಮನೆಗೆ ತೆರಳಿದ್ದ ಗರ್ಭಿಣಿಯನ್ನು ಮತ್ತೆ ಆಸ್ಪತ್ರೆಗೆ ಕರೆಯಿಸಿ ಕೋವಿಡ್ ಟೆಸ್ಟ್ ಮಾಡಲಾಯಿತು.ಗರ್ಭಿಣಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು ಎಂಬ ಮಾಹಿತಿ ಮಾದ್ಯಮಗಳಿಗೆ ಲಭಿಸಿದೆ.
ನಿನ್ನೆ ಬಂದ ವರದಿಯಲ್ಲಿ ಗರ್ಭಿಣಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿ, ಇ-ಪಾಸ್ ಪಡೆಯದೇ ಮುಂಬೈನಿಂದ ಬೆಳಗಾವಿಗೆ ಎಂಟ್ರಿ ಮಾಡಿದ ಆರೋಪದ ಮೇಲೆ, ಗರ್ಭಿಣಿಯ ಪತಿ, ಸಹೋದರ, ಕಾರು ಚಾಲಕನ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಬೆಳಗಾವಿ ನಗರದ ಎಪಿಎಂಸಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮತ್ತೆ ಇನ್ಯಾರು ಸಂಪರ್ಕಕ್ಕೆ ಬಂದಿದ್ದರೆಂಬ ಮಾಹಿತಿಯನ್ನು ಎಪಿಎಂಸಿ ಪೋಲೀಸರು ಪಡೆಯುತ್ತಿದ್ದಾರೆ.