ಬೆಳಗಾವಿ- ಕಳೆದ 55 ದಿನಗಳಿಂದ ನಿಶ್ಯಬ್ದ ವಾಗಿದ್ದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಾಳೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಮತ್ತೆ ಬಸ್ ಸಂಚಾರ ಆರಂಭಿಸಲಿದೆ.
ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ಸಂಚಾರ ಆರಂಭವಾಗಲಿದ್ದು ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಸ್ ನಿಲ್ಧಾಣದಲ್ಲಿ ಪ್ರಯಾಣಿಕರು ಸೋಶಿಯಲ್ ಡಿಸ್ಟನ್ಸ್ ಕಾಯ್ದು ಕೊಳ್ಳಲು ಅನಕೂಲವಾಗುವಂತೆ ಮಾರ್ಕಿಂಗ್ ಮಾಡಲಾಗಿದೆ.ನಾಳೆಯಿಂದ ಬಸ್ ನಿಲ್ಧಾಣದಲ್ಲಿ ಬಸ್ ಗಳು ಪ್ರಯಾಣಕ್ಕಾಗಿ ಪಾರ್ಕಿಂಗ್ ಆಗೋದಷ್ಟೇ ಬಾಕಿ ಇದೆ.
NWKRTC ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಒಂದೇ ಎಂಟ್ರಿ, ಒಂದೇ ಎಕ್ಸಿಟ್ ವ್ಯೆವಸ್ಥೆ ಮಾಡಲಾಗಿದೆ.
ನಿಲ್ದಾಣಕ್ಕೆ ಬರೋ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವದು, ಬಸ್ ನಿಲ್ದಾಣಕ್ಕೆ ಆಗಮಿಸುವವರಿಗಾಗಿ ಸ್ಯಾನಿಟೈಸರ್ ಸ್ಪ್ರೆಯಿಂಗ್ ಮಷಿನ್ ಅಳವಡಿಕೆಗೆ ವ್ಯವಸ್ಥೆ ಮಾಡಲಾಗಿದೆ.
ಒಂದು ಬಸ್ ನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಪ್ರಯಾಣ ದರ ಇಂದು ಸಂಜೆ ನಿರ್ಧಾರವಾಗಲಿದೆ ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ 252 ಬಸ್ ಗಳ ಸಂಚಾರ ಆರಂಭವಾಗಲಿದೆ.
ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸಾಮಾಜಿಕ ಅಂತರ ಪಾಲುಸಲು ಸೂಚನೆ ನೀಡಲಾಗಿದೆ ಚಾಲಕ, ನಿರ್ವಾಹಕರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲು ನಿರ್ಧಾರಿಸಲಾಗಿದೆ. 50 ವರ್ಷದ ಮೇಲಿನ ಸಾರಿಗೆ ಸಿಬ್ಬಂದಿ ಬಳಕೆ ಮಾಡುವುದಿಲ್ಲ, ಪ್ರಯಾಣಿಕರ ಬೇಡಿಕೆ ಅನುಸರಿಸಿ ಬಸ್ ಸಂಚಾರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು NWKRTC ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಮಾಹಿತಿ ನೀಡಿದ್ದಾರೆ.