ಬೆಳಗಾವಿ- ಇಂದು ಬೆಳಗಾವಿಗೆ ಶನಿಕಾಟ ಯಾಕಂದ್ರೆ ಇಂದು ಶನಿವಾರದ ಮಿಡ್ ಡೇ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯ 27ವರ್ಷದ ಮಹಿಳೆಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ತಾಂಡವ ಮುಂದುವರೆದಿದ್ದು ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಬೆಳಗಾವಿ ಜಿಲ್ಲೆಗೆ,ತಬ್ಲೀಗ್,ಅಜ್ಮೇರ್ ಹಾಗು ಮುಂಬಯಿ ನಂಟಿನಿಂದ ಇವತ್ತಿನವರೆಗೆ ಸೊಂಕಿತರು ಪತ್ತೆಯಾಗಿದ್ದಾರೆ . ಇವವತ್ತು ಸೊಂಕು ಪತ್ತೆಯಾದ ಮಹಿಳೆ ಮುಂಬಯಿ ರಿಟರ್ನ ಎಂದು ತಿಳಿದು ಬಂದಿದೆ
ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಈ ಮಹಾಮಾರಿ ಸೊಂಕು ಸಾಮಾಜಿಕವಾಗಿ ಹರಡಿಲ್ಲ.
ತಬ್ಲೀಗ್,ಅಜ್ಮೇರ್,ಹಾಗು ಮಹಾರಾಷ್ಟ್ರದ ನಂಟಿನ ಎಲ್ಲ ಶಂಕಿತರನ್ನು ಮೊದಲೇ ಕ್ವಾರಂಟೈನ್ ಮಾಡಿದ್ದರಿಂದ ಈ ಮಹಾಮಾರಿ ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ನಲ್ಲಿ ಇದೆ ಎಂದು ಹೇಳಿದ್ರೆ ತಪ್ಪಾಗಲಾರದು
ಜನ ದಿನ ಕಳೆದಂತೆ, ಮಾಸ್ಕ,ಸೈನಿಟೈಸರ್,ಬಳಕೆ ಮಾಡುವದನ್ನು ಮರೆಯಬಾರದು,ನಮ್ಮ ಆರೋಗ್ಯ ನಮ್ಮ ಕೈಯಲ್ಕಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕಿದರೆ ಕೊರೋನಾ ಸೊಂಕನ್ನು ಜಿಲ್ಲೆಯಿಂದ ಸಂಪೂರ್ಣವಾಗಿ ಹೋಗಲಾಡಿಸಬಹುದು
ಟೇಕ್ ಕೇರ್ ….ಬಿ ಅಲರ್ಟ್….