ಬೆಳಗಾವಿ:
ಇನ್ಸ್ಟಿಟ್ಯೂಷನಲ್ ಕ್ವಾರಂಟೈನಲ್ಲಿದ್ದ ಮಹಿಳೆ ಹಾಸ್ಟೆಲ್ ನಿಂದ ಎಸ್ಕೇಪ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಪೆರೋಲ್ ಮೇಲೆ ಜೈಲಿನಿಂದ ಬಂದಿದ್ದ ಗಂಡನ ಜತೆ ಮಹಿಳೆ ಎಸ್ಕೇಪ್ ಆಗಿರಬೇಕು ಅಂತಾ ಪೋಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಗೋಕಾಕ್ ತಾಲೂಕಿನ ಪಂಜಾನಟ್ಟಿ ಗ್ರಾಮದ ಮಹಿಳೆ ಮಹಾರಾಷ್ಟ್ರದ ನೂಲ್ ಗ್ರಾಮದಿಂದ ಬಂದಿದ್ದರು. ಮಹಾರಾಷ್ಟ್ರದಿಂದ ಬಂದಿದಕ್ಕೆ ಪಂಜಾನಟ್ಟಿ ಗ್ರಾಮ ಪ್ರವೇಶಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಗೋಕಾಕ ನಗರದ ಆಶ್ರಯ ಕಾಲನಿಯ ಹಾಸ್ಟೇಲಿನಲ್ಲಿ ಮಹಿಳೆಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ಪೆರೋಲ್ ಮೇಲೆ ಬಿಡುಗಡೆಯಾದ ಪತಿಯನ್ನು ಭೇಟಿ ಮಾಡಲು ಪತ್ನಿ ಕ್ವಾರಂಟೈನ್ ಭದ್ರತೆ ಭೇದಿಸಿ ಪರಾರಿಯಾಗಿದ್ದಳು
ಕೊನೆಗೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಪತಿ, ಕ್ವಾರಂಟೈನ್ ನಿಂದ ಎಸ್ಕೇಪ್ ಆಗಿದ್ದ ಪತ್ನಿ ಇಬ್ಬರೂ ಬೆಲ್ಲದ ಬಾಗೇವಾಡಿ ಯಲ್ಲಿ ಪೋಲೀಸರ ಬಲೆಗೆ ಬಿದ್ದಿದ್ದಾರೆ.