ಬೆಳಗಾವಿ- ಇಂದು ಬುಧವಾರ ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರಿಗೆ ಸೊಂಕು ದೃಡವಾಗಿದೆ.
ಇಂದು ಪತ್ತೆಯಾದ ನಾಲ್ವರು ಸೊಂಕಿತರ ಪೈಕಿ P 2384 32 ವರ್ಷದ ಮಹಿಳೆ ಹಂದಿಗನೂರ ಗ್ರಾಮದವಳು
P2383 ಎರಡು ವರ್ಷದ ಹೆಣ್ಣು ಮಗು ಕೇರಳದಿಂದ ವಾಪಸ್ ಈ ಮಗುವಿನ ಪೋಷಕರ ರಿಪೋರ್ಟ್ ನೆಗೆಟೀವ್ ಬಂದಿದೆ ಎಂದು ತಿಳಿದು ಬಂದಿದೆ.ಈ ಮಗುವಿನ ಕುಟುಂಬ ಭಾಗ್ಯನಗರದಲ್ಲಿ ವಾಸವಾಗಿತ್ತು ಎಂಬ ಮಾಹಿತಿ ಇದೆ,ಆದರೆ ಈ ಬಗ್ಗೆ ಸಮಂಧಿಸಿದ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡುವದು ಅಗತ್ಯವಾಗಿದೆ.ಈ ಮಗುವಿನ ಅಜ್ಜಿಯ ಮನೆ ವಡಗಾವಿಯಲ್ಲಿ ಇದೆ ಅಲ್ಲಿಗೂ ಈ ಮಗುವಿನ ಕುಟುಂಬದವರು ಹೋಗಿ ಬಂದಿದ್ದರೆಂಬ ಮಾಹಿತಿ ಇದೆ,ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ಕೊಡಬೇಕಾಗಿದೆ.
P 2385 28 ವರ್ಷದ ಪುರುಷ ಬೆಳಗಾವಿಯ ಕುಮಾರಸ್ವಾಮಿ ಲೇಔಟ್ ನಿವಾಸಿ ಎಂದು ಗೊತ್ತಾಗಿದೆ.
P 2386 37 ವರ್ಷದ ಪುರುಷ ಈತನನ್ನು ಸದಾಶಿವ ನಗರದ ಹಾಸ್ಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಆದ್ರೆ ಈತನ ವಾಸ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಇಂದು ಪತ್ತೆಯಾದ ನಾಲ್ವರು ಸೊಂಕಿತರ ಟ್ರಾವೆಲ್ ಹಿಸ್ಟರಿಯ ಕುರಿತು ಯಾವೊಬ್ಬ ಅಧಿಕಾರಿಯೂ ಅಧಿಕೃತ ಮಾಹಿತಿ ಕೊಟ್ಟಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ