ಬೆಳಗಾವಿ- ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ ವಿಪರೀತವಾಗಿದ್ದು,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ ಶುರುವಾಗಿದೆ.
ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಿಡತೆ ದಾಳೆ ಎದುರಾಗುವ ಆತಂಕವಿದ್ದು ಗಡಿ ಜಿಲ್ಲೆಗಳಾದ,ಗುಲ್ಬರ್ಗ, ರಾಯಚೂರ,ವಿಜಯಪೂರ,ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರಾಶಿ,ರಾಶಿ ಮಿಡತೆಗಳು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಹಾರಾಷ್ಟ್ರದ ವಿಧರ್ಭ ಭಾಗದಲ್ಲಿ ಮಿಡತೆ ದಾಳಿಯಿಂದ ರೈತರು ಕಂಗಾಲಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮಿಡತೆ ದಾಳಿ ಎದುರಿಸಲು ಕೃಷಿ ಇಲಾಖೆ ಸಜ್ಜಾಗಿದೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ,ಮೊಕಾಶಿ ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿ,ಮಿಡತೆ ದಾಳಿ ಮಾಡುವ ಮುನ್ಸೂಚನೆ ಇರುವ ಹಿನ್ನಲೆಯಲ್ಲಿ ಈ ಕುರಿತು ಇಂದಿನಿಂದ ಗ್ರಾಮ ಮಟ್ಟದಲ್ಲಿ ಡಂಗುರ ಬಾರಿಸಿ ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ.ಮಿಡತೆ ನಾಶ ಮಾಡುವ ಔಷಧಿಯನ್ನು ಬೆಳಗಾವಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸ್ಟಾಕ್ ಮಾಡಿದ್ದೇವೆ. ಎಂದು ತಿಳಿಸಿದ್ದಾರೆ.
ಆ ಕಡೆ ಚೀನಾ ದಾಳಿ,ಒಳಗಡೆ ಕೊರೋನಾ ದಾಳಿ,ಈ ಕಡೆಯಿಂದ ಈಗ ಮಿಡತೆ ದಾಳಿ ಶರುವಾಗಲಿದೆ.ಎಲ್ಲ ರೀತಿಯ ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಭಾರತೀಯರಿಗೆ ಇದೆ.ಹೀಗಾಗಿ ಈ ಮಿಡತೆ ದಾಳಿಯನ್ನು ಎದುರಿಸಲು ವಿಶೇಷವಾಗಿ ಅನ್ನದಾತರು ಸಜ್ಜಾಗುವದು ಅಗತ್ಯ.