ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಅರ್ಭಟದ ಜೊತೆ ಜೊತೆಗೆ ಮಹಾಮಾರಿ ಕೊರೋನಾ ಅರ್ಭಟವೂ ಬೆಳಗಾವಿ ಜಿಲ್ಲೆಗೆ ವಕ್ಕರಿಸಿದೆ ಇಂದು ಭಾನುವಾರದ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13ಜನರಲ್ಲಿ ಸೊಂಕು ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 160 ಕ್ಕೇರಿದೆ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 162ಕ್ಕೇರಿದಂತಾಗಿದೆ.
ಇಂದು ಪತ್ತೆಯಾದ ಎಂಟು ಜನ ಸೊಂಕಿತರ ಪೈಕಿ ಇಬ್ಬರು ಬೆಳಗಾವಿ ತಾಲ್ಲೂಕಿನ ಅಗಸಗಿ ಗ್ರಾಮದವರು.
ಒಬ್ಬರು ಬೆಳಗಾವಿ ತಾಲ್ಲೂಕಿನ ಮಾಳ್ಯಾನಟ್ಟಿ ಗ್ರಾಮದವರು ಇನ್ನುಳಿದ ಐವರು ಚಿಕ್ಕೋಡಿ ನಗರ ಹಾಗು ಅಕ್ಕ ಪಕ್ಕದ ಗ್ರಾಮದವರು ಎಂದು ತಿಳಿದು ಬಂದಿದೆ.
ಬೆಳಗಾವಿ ತಾಲ್ಲೂಕಿನ ಮೂವರು ಮಹಾರಾಷ್ಟ್ರ ರಿಟರ್ನ ಆಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಮಹಾರಾಷ್ಟ್ರದ ನಂಜು ಏರುತ್ತಲೇ ಇದೆ.ಈ ಮೂವರು ಸೊಂಕಿತರು ಕ್ವಾರಂಟೈನ್ ಅವಧಿ ಮುಗಿಸಿ ವರದಿ ಬರುವ ಮೊದಲೇ ಮನೆ ಸೇರಿದ್ದರು.
ಚಿಕ್ಕೋಡಿ ನಗರ ಹಾಗೂ ಅಕ್ಕ ಪಕ್ಕದ ಗ್ರಾಮದ ಐವರು ಸೊಂಕಿತರು ಮಹಾರಾಷ್ಟ್ರದ ನಂಟು ಹೊಂದಿದ್ದರು ಈ ಐವರೂ ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದವರು ಎಂದು ತಿಳಿದು ಬಂದಿದೆ.
ಚಿಕ್ಕೋಡಿ ನಗರ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಇಂದು ಪತ್ತೆಯಾದ ಐವರು ಸೊಂಕಿತರಲ್ಲಿ,ಓರ್ವಳು ಮಹಾರಾಷ್ಟ್ರದ ಠಾಣೆಯಿಂದ ಚಿಕ್ಕೋಡಿ ತಾಲ್ಕೂಕಿನ ಹಿರೇಕೋಡಿ ಗ್ರಾಮದವಳು,ಮಹಾರಾಷ್ಟ್ರದ ಹುಸಮಾನಾ ಬಾದ್ ದಿಂದ ಚಿಕ್ಕೋಡಿ ತಾಲ್ಲೂಕಿನ ನಂದಿವಾಡಿ ಗ್ರಾಮಕ್ಕೆ ಮರಳಿದ್ದರು ದೆಹಲಿಯಿಂದ ಇಬ್ಬರು ಚಿಕ್ಕೋಡಿ ನಗರಕ್ಕೆ ಮರಳಿದ್ದರು.ಈ ಐವರಿಗೂ ಈಗ ಸೊಂಕು ಪತ್ತೆಯಾಗಿದೆ.
ಇನ್ನು ಐವರ ಸೊಂಕಿತರ ಬಗ್ಗೆ ಮಾಹಿತಿ ಸಿಕ್ಕಿಲ್ಲ