ಬೆಳಗಾವಿ- ವೀಸಾ ನಿಯಮ ಉಲ್ಲಂಘಿಸಿ ದೆಹಲಿಯಿಂದ ಬೆಳಗಾವಿಗೆ ಆಗಮಿಸಿ, ಧಾರ್ಮಿಕ ಪ್ರಚಾರ ನಡೆಸಿದ ಆರೋಪ ಮೇಲೆ, ಇಂಡೋನೇಷ್ಯಾದ 10, ದೆಹಲಿಯ ಇಬ್ಬರು ಸೇರಿ 12 ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಐವರು ಮಹಿಳೆಯರು ಸೇರಿ ಒಟದಟು 12 ಜನರು ಪೊಲೀಸ್ ವಶದಲ್ಲಿದ್ದು ಬೆಳಗಾವಿ ನಗರದ ಮಾಳಮಾರುತಿ ಠಾಣೆ ಪೊಲೀಸರು 12 ಜನರನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆಯೇ ಮಾಳಮಾರುತಿ ಪೋಲೀಸರು ಈ ಹನ್ನೆರಡು ಜನರ ವಿರುದ್ಧ ಎಫ ಐ ಆರ್ ದಾಖಲಿಸಿ ಮಸೀದಿಯೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿಸಿ, ಚಿಕಿತ್ಸೆ ಕೊಡಲಾಗಿತ್ತು.
ಇಂದು ವೈದ್ಯಕೀಯ ಪರೀಕ್ಷೆ ನಡೆಸಿ ಈ ಹನ್ನೆರಡು ಜನರನ್ನು ಮಾಳಮಾರುತಿ ಪೋಲೀಸರು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ
ಮಾರ್ಚ್ 11 ರಂದು ದೆಹಲಿಯಿಂದ ಬೆಳಗಾವಿಗೆ ಬಂದಿದ್ದ 12 ಜನರು,ಇಂಡೋನೇಷ್ಯಾದ 10, ದೆಹಲಿಯ ಇಬ್ಬರಿಂದ ಧರ್ಮ ಪ್ರಚಾರ ನಡೆದಿತ್ತು,ಮಾರ್ಚ್ 11ರಿಂದ ಮಾರ್ಚ್ 16ರವರೆಗೆ ನಗರದ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ಪ್ರಚಾರ ಮಾಡಿದ ಇವರು, ವೀಸಾ ನಿಯಮ ಉಲ್ಲಂಘನೆ ಆರೋಪದಡಿ 10 ಜನರ ವಿರುದ್ಧ FIR ದಾಖಲಾಗಿತ್ತು, ಏಪ್ರಿಲ್ 10ರಂದು ಮಾಳಮಾರುತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು, ಮಾರ್ಚ್ 16ರಿಂದ ಜೂನ್ 1ರವರೆಗೆ ಮಸೀದಿಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು
ಕೋವಿಡ್ ವರದಿ ನೆಗೆಟಿವ್ ಹಾಗೂ ಕ್ವಾರಂಟೈನ್ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಇಂದು ಐವರು ಮಹಿಳೆಯರು ಸೇರಿ 12 ಜನರನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ.