ಬೆಳಗಾವಿ- ರಾಜ್ಯ ಸರ್ಕಾರದ ಯಡವಟ್ಟಿನಿಂದ ಬೆಳಗಾವಿ ಜಿಲ್ಲೆಯ, ಗ್ರಾಮ ಗ್ರಾಮಗಳಲ್ಲಿಯೂ ಕೊರೊನಾ ಹಬ್ಬುತ್ತಿದೆ ಇಂದು ಮಂಗಳವಾರ ದಾಖಲೆ ಪ್ರಮಾಣದಲ್ಲಿ ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 200 ರ ಗಡಿ ದಾಟಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 51 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 26 ಸೊಂಕಿತರು,ಬೆಳಗಾವಿ ಕಮಿಷ್ನರೇಟ್ ವ್ಯಾಪ್ತಿಯಲ್ಲಿ 22 ,ಹಾಗೂ ಮೂಡಲಗಿ ತಾಲ್ಲೂಕಿನ ಕಲ್ಲೊಳ್ಳಿ,ಮತ್ತು ಗೋಕಾಕ ತಾಲೂಕಿನ ಶಿಲ್ತಿಬಾಳಿ ಗ್ರಾಮದಲ್ಲಿ ತಲಾ ಒಬ್ಬರು ಸೊಂಕಿತರು ಪತ್ತೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ ಡಬಲ್ ಸೆಂಚ್ಯುರಿ ಬಾರಿಸಿ 211ಕ್ಕೆ ತಲುಪಿದೆ.ವರದಿ ಬರುವ ಮೊದಲೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಆಗಿದ್ದ ಹಲವರಲ್ಲಿ ಸೋಂಕು ಇರುವದು ದೃಡವಾಗಿದೆ.
ಬೆಳಗಾವಿ, ಹುಕ್ಕೇರಿ ತಾಲೂಕಿನಲ್ಲಿ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.ಸೇಫ್ ಆಗಿದ್ದ ಗೋಕಾಕ್, ಮೂಡಲಗಿ ತಾಲೂಕಿಗೂ ಸೋಂಕು ಎಂಟ್ರಿ ಮಾಡಿದೆ.
ರಾಜ್ಯ ಸರ್ಕಾರದ ಯಡವಟ್ಟಿಂದ ಗ್ರಾಮಗಳಿಗೂ ಡೆಡ್ಲಿ ಕೊರೊನಾ ಎಂಟ್ರಿ ಕೊಟ್ಟಿದ್ದು, ಮುಂಬೈನಿಂದ ವಾಪಸ್ ಆಗಿದ್ದ ಹಲವರಲ್ಲಿ ಕೊರೊನಾ ಸೋಂಕು ದೃಡವಾಗಿದ್ದು ,ಮುಂಬೈ ನಂಜು ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿದೆ.
ವರದಿ ಬರೋ ಮೊದಲೇ ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಬಿಡುಗಡೆ ಮಾಡಿದವರಲ್ಲೇ ಸೋಂಕು ಕಾಣಿಸಿಕೊಂಡಿದ್ದು. 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದು ವ್ಯರ್ಥ ಆದಂತಾಗಿದೆ.