ಬೆಳಗಾವಿ- ಒಂದು ವಾರದ ಹಿಂದೆ ನೂರಾರು ಜನ ನೇಕಾರ ಕೂಲಿ ಕಾರ್ಮಿಕರು,ಏಕಾ ಏಕಿ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಕಚೇರಿಗೆ ಮುತ್ತಿಗೆ ಹಾಕಿ ಆಹಾರ ಸಾಮುಗ್ರಿಗಳ ಕಿಟ್ ಕೊಡುವಂತೆ ಒತ್ತಾಯಿಸಿದ್ದರು.
ಸುರೇಶ್ ಅಂಗಡಿ ಅವರು ಆಹಾರ ಸಾಮುಗ್ರಿಗಳ ಕಿಟ್ ಕೊಡುತ್ತಿದ್ದಾರೆ ಎಂಬ ಸುಳ್ಳು ವದಂತಿ ಹರಡಿಸಿದ ಹಿನ್ನಲೆಯಲ್ಲಿ ನೂರಾರು ಜನ ಕಾರ್ಮಿಕರು,ಕಾಡಾ ಕಚೇರಿಯಲ್ಲಿನ ಸುರೇಶ ಅಂಗಡಿಯವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಆಹಾರದ ಕಿಟ್ ವಿತರಿಸುವಂತೆ ಒತ್ತಾಯ ಮಾಡಿದ್ದರು.
ಇದಕ್ಕೆ ಸಕಾರಾತ್ಮಕ ವಾಗಿ ಸ್ಪಂದಿಸಿದ ಸಚಿವ ಸುರೇಶ ಅಂಗಡಿ,ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸುಮಾರು 2ಸಾವಿರ ಆಹಾರದ ಕಿಟ್ ಗಳನ್ನು ಬೆಂಗಳೂರಿನಿಂದ ತರಿಸಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದ ನೇಕಾರ ಕೂಲಿ ಕಾರ್ಮಿಕರಿಗೆ ಇಂದು ಆಹಾರದ ಕಿಟ್ ಗಳನ್ಮು ವಿತರಿಸಿದರು.
ಜಿಲ್ಲಾಧಿಕಾರಿ ಬೊಮ್ಮನಹಳ್ಳಿ,ಸಚಿವ ಸುರೇಶ್ ಅಂಗಡಿ ಅವರು ನೇಕಾರ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಕೊಟ್ಟ ಭರವಸೆ ಈಡೇರಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ